ಸಾಲಗಾರರ ಕಿರುಕುಳ…ಡೆತ್ ನೋಟ್ ಬರೆದು ಲೇಡೀಸ್ ಪಿಜಿ ಓನರ್ ಆತ್ಮಹತ್ಯೆ…12 ಮಂದಿ ವಿರುದ್ದ FIR ದಾಖಲು…

ಮೈಸೂರು,ಮಾ1,Tv10 ಕನ್ನಡ

ಸಾಲಗಾರರ ಕಾಟಕ್ಕೆ ಬೇಸತ್ತ ಲೇಡೀಸ್ ಪಿಜಿ ಓನರ್ ಡೆತ್ ನೋಟ್ ಬರೆದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಬಡಾವಣೆಯಲ್ಲಿ ನಡೆದಿದೆ.ಜಯಶ್ರೀ ಆತ್ಮಹತ್ಯೆಗೆ ಶರಣಾದ ಲೇಡೀಸ್ ಪಿಜಿ ಓನರ್.ವಿಜಯನಗರ ನಿವಾಸಿಗಳಾದ ಸಾವಿತ್ರಿ,ಸುಕನ್ಯ,ಪ್ರೇಮಾ,ದೇವಮ್ಮ,ಸಾಕಮ್ಮ,ಪುಷ್ಪಲತಾ,ಪುಷ್ಪ,ಸುಮ,ಶೋಭಾ,ವಿಜಯ,ಫೈನಾನ್ಸ್ ಮಾಲೀಕ ಪ್ರದೀಪ್ ಹಾಗೂ ಕುಮಾರ್ ಎಂಬುವರು ಕಿರುಕುಳ ನೀಡುತ್ತಿದ್ದಾರೆಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ಹಿನ್ನಲೆ FIR ದಾಖಲಾಗಿದೆ.

ಕಳೆದ 10 ವರ್ಷಗಳಿಂದ ಜಯಶ್ರೀ ರವರು ರೈಲ್ವೆ ಬಡಾವಣೆಯಲ್ಲಿ ಗಂಗಾಧರೇಶ್ವರ ಲೇಡೀಸ್ ಪಿಜಿ ನಡೆಸುತ್ತಿದ್ದರು.ತಮ್ಮ ವ್ಯವಹಾರಕ್ಕಾಗಿ ಸಾಕಷ್ಟು ಮಂದಿಯಿಂದ ಸಾಲ ಪಡೆದಿದ್ದರು.ಸಮಯಕ್ಕೆ ಸರಿಯಾಗಿ ಸಾಲ ಹಿಂದಿರುಗಿಸಲು ಜಯಶ್ರೀ ವಿಫಲರಾಗಿದ್ದರು.ಹೀಗಾಗಿ ಆಗಾಗ ಸಾಲಗಾರರು ಪಿಜಿ ಬಳಿ ಬಂದು ಗಲಾಟೆ ಮಾಡುತ್ತಿದ್ದರು.ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಜಯಶ್ರೀ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.ಡೆತ್ ನೋಟ್ ನಲ್ಲಿ ಮಗ ಭರತ್ ಗೆ ತಮ್ಮ ನೋವನ್ನ ತಿಳಿಸಿದ್ದಾರೆ. *ನಾನು ನನ್ನ ಮಕ್ಕಳಿಗೆ ಒಳ್ಳೆ ತಾಯಿ ಆಗಲಿಲ್ಲ,ಸಾಲದ ತಾಯಿ ಆದೆ,ಸಾಲಗಾರರಿಗೆ ಬಡ್ಡಿ ತಿನ್ನಿಸಿದ್ದೇನೆ,ಸಾಲಗಾರರು ಪಿಜಿ ಮುಂದೆ ಬಂದು ಮರ್ಯಾದೆ ತೆಗೆದಿದ್ದಾರೆ.ಸಾಲ ತೀರಿಸದಿದ್ದಲ್ಲಿ ಸಾಯುವುದೇ ಲೇಸು ಎಂದು ಕಿರುಚಾಡಿದ್ದಾರೆಂದು ಆರೋಪಿಸಿ 12 ಮಂದಿಯನ್ನ ಉಲ್ಲೇಖಿಸಿದ್ದಾರೆ.ವಿಜಯನಗರ ಪೊಲೀಸ್ ಠಾಣೆಯಲ್ಲಿ ಈ ಸಂಭಂಧ ಪ್ರಕರಣ ದಾಖಲಾಗಿದೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *