ಲೋಕಾಯುಕ್ತ ಬಲೆಗೆ ಗ್ರಾಮ ಲೆಕ್ಕಿಗ…ಖಾತೆ ಮಾಡಿಕೊಡಲು 20 ಸಾವಿರ ಲಂಚಕ್ಕೆ ಡಿಮ್ಯಾಂಡ್…
- TV10 Kannada Exclusive
- March 8, 2024
- No Comment
- 231
ಮಂಡ್ಯ,ಮಾ8,Tv10 ಕನ್ನಡ
ಮಂಡ್ಯ ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಗೆ ಗ್ರಾಮ ಲೆಕ್ಕಿಗ
ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.
ಮಂಡ್ಯದ ನಾಗಮಂಗಲದ ಹೊಣಕೆರೆಯಲ್ಲಿ ಘಟನೆ ನಡೆದಿದೆ.
ನಾಗರಾಜು ಸಿಕ್ಕಿಬಿದ್ದ ಗ್ರಾಮ ಲೆಕ್ಕಿಗ.
ಶಿವಣ್ಣ ಎಂಬ ರೈತನ ಬಳಿ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ.
ಆಸ್ತಿ ಖಾತೆ ಮಾಡುವ ವಿಚಾರಕ್ಕೆ ಲಂಚದ ಬೇಡಿಕೆ ಇಟ್ಟಿದ್ದ.
ಮುಂಗಡವಾಗಿ 7 ಸಾವಿರ ಲಂಚ ಸ್ವೀಕರಿಸಿದ್ದು
ಉಳಿದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ದೂರು ಬಂದ ಹಿನ್ನೆಲೆ ಮಂಡ್ಯ ಲೊಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಲಂಚಕೋರನನ್ನ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ಎಸ್ಪಿ ಸುರೇಶ್ ಬಾಬು, ಬ್ಯಾಟರಾಯಗೌಡ, ಶಂಕರೇಗೌಡ ಶರತ್, ನವೀನ್, ಮಾನಸ ರಿಂದ ದಾಳಿ ನಡೆದಿದೆ…