ಆನ್ ಲೈನ್ ವಂಚನೆ…ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 2.03 ಕೋಟಿಗೆ ಪಂಗನಾಮ…ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು…
- CrimeTV10 Kannada Exclusive
- March 8, 2024
- No Comment
- 252
ಮೈಸೂರು,ಮಾ8,Tv10 ಕನ್ನಡ
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳಿಗೆ ಆನ್ ಲೈನ್ ಮೂಲಕ 2.03 ಕೋಟಿ ವಂಚನೆ ಮಾಡಿದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೊದಲ ಪ್ರಕರಣದಲ್ಲಿ ನಿವೇದಿತಾ ನಗರ ಬಡಾವಣೆಯ ನಿವಾಸಿ ನಟರಾಜ್ ಜರ್ಮಲೆ ರವರು 1,30,20,047/- ವಂಚನೆಗೆ ಒಳಗಾಗಿದ್ದರೆ ಮತ್ತೊಬ್ಬ ವಿಜಯನಗರ ನಿವಾಸಿ ಮಂದಪ್ಪ ಎಂಬುವರು 72,94,709/- ರೂ ಗಳನ್ನ ಕಳೆದುಕೊಂಡಿದ್ದಾರೆ.
ನಟರಾಜ್ ಜರ್ಮಲೆ ಅವರನ್ನ ಸ್ಕೈಪ್ ಮೂಲಕ ಪರಿಚಯಿಸಿಕೊಂಡ ವಂಚಕ ತಾನೊಬ್ಬ ಮುಂಬೈ ಪೊಲೀಸ್ ಅಧಿಕಾರಿ ಎಂದು ನಂಬಿಸಿದ್ದಾನೆ.ನಿಮ್ಮ ಆಧಾರ್ ಕಾರ್ಡ್ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಕೆಯಾಗಿದೆ.ನಿಮ್ಮ ವಿರುದ್ದ ಎಫ್.ಐ.ಆರ್.ಆಗಿದೆ.ನಿಮ್ಮ ಮೇಲೆ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆದರಿಸಿದ್ದಾನೆ.ನಿಮ್ಮ ಆಧಾರ್ ಕಾರ್ಡ್ ಕಾನೂನು ಬಾಹಿರ ಜಾಹಿರಾತು,ಮನಿ ಲಾಂಡರಿಂಗ್ ಗೆ ಬಳಕೆಯಾಗಿದೆ.ಅಲ್ಲದೆ ಮಿನಿಸ್ಟರ್ ಗಳು ಮತ್ತು ಸರ್ಕಾರಿ ನೌಕರರ ಜೊತೆ ಸೇರಿಕೊಂಡು ಭ್ರಷ್ಟಾಚಾರದಲ್ಲಿ ಭಾಗಿಯಾದಂತೆ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದ್ದಾನೆ.ಇದರಿಂದ ವಿಚಲಿತರಾದ ನಟರಾಜ್ ಜರ್ಮಲೆ ವಿವಿದ ಹಂತಗಳಲ್ಲಿ ವಿವಿದ ಬ್ಯಾಂಕ್ ಮೂಲಕ 1,30,20,047/- ರೂಗಳನ್ನ ವರ್ಗಾಯಿಸಿದ್ದಾರೆ.ನಂತರ ತಾವು ಮೋಸ ಹೋಗಿರುವುದಾಗಿ ತಿಳಿದು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ವಿಜಯನಗರದ ಮಂದಪ್ಪ ರವರು ಇನ್ಸ್ಟಾಗ್ರಾಮ್ ಮೂಲಕ ಕೆಲವು ಕಂಪನಿಗಳ ಬಗ್ಗೆ ಮಾಹಿತಿ ಪಡೆದು ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ ಅವರ ಸಲಹೆಯಂತೆ ಸ್ಟಾಕ್ ಟ್ರೇಡಿಂಗ್ ಖಾತೆ ತೆರೆದಿದ್ದಾರೆ.ಸ್ಟಾಕ್ ಗಳನ್ನ ಖರೀದಿಸಿ ಮಾರಾಟ ಮಾಡಿದರೆ ಲಾಭ ನೀಡುವುದಾಗಿ ನಂಬಿಸಿ ವಿವಿದ ಹಂತಗಳಲ್ಲಿ 72,94,709/- ರೂ ಗಳನ್ಮ ಇನ್ವೆಸ್ಟ್ ಮಾಡಿಸಿದ್ದಾರೆ.ನಂತರ ಲಾಭವೂ ಇಲ್ಲ ಇನ್ವೆಸ್ಟ್ ಮಾಡಿದ ಹಣವೂ ಇಲ್ಲದಂತೆ ವಂಚನೆ ಮಾಡಿದ್ದಾರೆಂದು ಮಂದಪ್ಪ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…