ಲೋಕಸಭೆ ಚುನಾವಣೆ: ಶಾಂತಿಯುತ ಮತದಾನಕ್ಕೆ ಮೈಸೂರು ಖಾಕಿ ಪಡೆ ಸಿದ್ದತೆ…ಎನ್.ಆರ್.ಉಪವಿಭಾಗದಿಂದ ರೂಟ್ ಮಾರ್ಚ್…ಸಾರ್ವಜನಿಕರಿಗೆ ಅಭಯ…
- TV10 Kannada Exclusive
- March 8, 2024
- No Comment
- 397
ಮೈಸೂರು,ಮಾ8,Tv10 ಕನ್ನಡ
ಲೋಕಸಭೆ ಚುನಾವಣೆ ಸನಿಹವಾಗುತ್ತಿರುವ ಹಿನ್ನಲೆ ಶಾಂತಿಯುತ ಮತದಾನಕ್ಕೆ ಮೈಸೂರು ಖಾಕಿ ಪಡೆ ಸಜ್ಜಾಗುತ್ತಿದೆ.ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸುವ ಮೂಲಕ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ.ಎನ್.ಆರ್.ಉಪವಿಭಾಗದ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಥಸಂಚಲನ ನಡೆಸಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ನೇತೃತ್ವದಲ್ಲಿ ಪಥಸಂಚಲನ ನಡೆದಿದೆ. ಬೆಳಿಗ್ಗೆ 7 ಗಂಟೆಗೆ ರೂಟ್ ಡಿ.ವಿ.ಎನ್. ವೃತ್ತ,1008 ಗಣಪತಿ ವೃತ್ತ, ಗಾಯತ್ರಿ ರಾಮಾಂದಿರ ವೃತ್ತ, ಉಸ್ಮಾನಿಯ ಬ್ಲಾಕ್, ಗೌರ್ಮೆಂಟ್ ಹಾಸ್ಟೆಲ್, ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್, ಒಂದನೇ ಕ್ರಾಸ್ ಕೆಸರೆ ಎರಡನೇ ಹಂತ, ನಾಯ್ಡು ನಗರ ಮುಖ್ಯ ರಸ್ತೆ, ನಾಯ್ಡು ನಗರ ಬಸ್ ಸ್ಟ್ಯಾಂಡ್ ಸೇರಿದಂತೆ ಸೂಕ್ಷ್ಮ ಪ್ರದೇಶದಲ್ಲಿ ನೂರಾರು ಪೊಲೀಸರು ಸಂಚರಿಸಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಕಿಡಿಗೇಡಿಗಳಿಗೆ,ಸಮಾಜಘಾತುಕ ಶಕ್ತಿಗಳಿಗೆ ಎಚ್ಚರಿಕೆಯ ಗಂಟೆ ನೀಡಿದ್ದಾರೆ. ಇಂದಿನ ಪಥಸಂಚಲನದಲ್ಲಿ ಎನ್.ಆರ್.ಉಪವಿಭಾಗದ ಎಸಿಪಿ ಸುಧಾಕರ್,ಇನ್ಸ್ಪೆಕ್ಟರ್ ನಿರಂಜನ್ ಕುಮಾರ್ ಹಾಗೂ ಉಪವಿಭಾಗದ ಎಲ್ಲಾಠಾಣೆಯ ಇನ್ಸ್ಪೆಕ್ಟರ್ ಗಳು ಸಬ್ ಇನ್ಸ್ಪೆಕ್ಟರ್ ಗಳು ಮತ್ತು CISF ಪಡೆ ಭಾಗವಹಿಸಿ ನಿರ್ಭಯವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ…