ರಾಜಾ ಕಾಲುವೆ ಮೇಲೆ ಅಕ್ರಮ ಕಟ್ಟಡ ನಿರ್ಮಾಣ…ಕಣ್ಮುಚ್ಚಿ ಕುಳಿತ ಅಧಿಕಾರಿಗಳು…ಆರ್.ಟಿ.ಐ.ಕಾರ್ಯಕರ್ತನಿಂದ ದೂರು…
- TV10 Kannada Exclusive
- March 11, 2024
- No Comment
- 852
ಮೈಸೂರು,ಮಾ11,Tv10 ಕನ್ನಡ
ರಾಜಾಕಾಲುವೆ (ಹದ್ದುಗಿಡಿದ ಹಳ್ಳ) ಮೇಲೆ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.ನಕಲಿ ದಾಖಲೆಗಳನ್ನ ಸೃಷ್ಟಿಸಿಕೊಂಡು ಅಕ್ರಮ ಎಸಗುತ್ತಿದ್ದರೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಾಮೀಲಾಗಿ ಭೂಗಳ್ಳರಿಗೆ ಸಾಥ್ ನೀಡುತ್ತಿದ್ದಾರೆ.ಈ ಬಗ್ಗೆ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಜಿಲ್ಲಾಧಿಕಾರಿಗಳಿಗೆ ಹಾಗೂ ಮೈಸೂರು ತಾಲೂಕು ತಹಸೀಲ್ದಾರ್ ಗೆ ದೂರು ನೀಡಿದ್ದಾರೆ.ಮೈಸೂರು ತಾಲೂಕು ಕಸಬಾ ಹೋಬಳಿ ಕುರುಬಾರಹಳ್ಳ ಸರ್ವೆ ನಂ.4 ರಲ್ಲಿ ಹಾದುಹೋಗಿರುವ ರಾಜಾಕಾಲುವೆ ಮೇಲೆ ಅಕ್ರಮ ಕಟ್ಟಡ ತಲೆ ಎತ್ತಿ ನಿಂತಿದೆ.ಚಂದ್ರಶೇಖರ್ ಎಂಬ ವ್ಯಕ್ತಿ ಜೆಸಿ ನಗರ ನಿವೇಶನ ಸಂಖ್ಯೆ 309/1 ನಗರಪಾಲಿಕೆ ವ್ಯಾಪ್ತಿಗೆ ಬರುವ ವಲಯ ಕಚೇರಿ 1 ರಲ್ಲಿ ಕಂದಾಯ ಪಾವತಿಸಿ ದಾಖಲೆ ಸೃಷ್ಟಿಸಿಕೊಂಡು ಇದನ್ನೇ ಬಳಸಿ ಕೆಸಿ ಬಡಾವಣೆಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.ಸದರಿ ಸ್ಥಳವು ಕಂದಾಯ ಇಲಾಖೆಗೆ ಸೇರಿದ ರಾಜಾಕಾಲುವೆ ಆಗಿದೆ.ವಲಯ ಕಚೇರಿ 1 ರ ರೆವಿನ್ಯೂ ಇನ್ಸ್ಪೆಕ್ಟರ್ ಮತ್ತು ಆರ್.ಓ.ರವರು ರೆವಿನ್ಯೂ ಟೆಂಪ್ ಐಡಿ 219727 ಮೂಲಕ 2020-21 ರಿಂದ 2023-24 ರವರೆಗೆ ಕಂದಾಯ ಪಾವತಿಸಿಕೊಂಡು ಅಕ್ರಮಕ್ಕೆ ಸಾಥ್ ನೀಡಿದ್ದಾರೆ.ಅಲ್ಲದೆ ಚೆಸ್ಕಾಂ ನವರು ಸಹ ವಿದ್ಯುತ್ ಸಂಪರ್ಕ ನೀಡಿದ್ದಾರೆ.ಸದರಿ ಸ್ಥಳ ಸರ್ಕಾರಿ ಆಸ್ತಿ ಬಿ ಖರಾಬು ಆಗಿರುವುದರಿಂದ ರಾಜಾಕಾಲುವೆ ಮೇಲೆ ನಿರ್ಮಾಣವಾಗಿರುವ ಅಕ್ರಮ ಕಟ್ಟಡ ತೆರವುಗೊಳಿಸಿ ತಪ್ಪಿತಸ್ಥರ ವಿರುದ್ದ ಕ್ರಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ…