ಅಯಾಜ್ ಪಂಡು ಸಹೋದರ ಅಕ್ಮಲ್ ಕೊಲೆ ಪ್ರಕರಣ…ಕಾರ್ಪೊರೇಟರ್ ಬಷೀರ್,KMDC ಅಧ್ಯಕ್ಷ ಅಲ್ತಾಫ್ ಸೇರಿದಂತೆ 5 ಮಂದಿ ವಿರುದ್ದ FIR ದಾಖಲು…
- Crime
- March 10, 2024
- No Comment
- 595
ಮೈಸೂರು,ಮಾ10,Tv10 ಕನ್ನಡ
ಕಾರ್ಪೊರೇಟರ್ ಅಯಾಜ್ ಪಂಡು ಸಹೋದರ ಮೊಹಮದ್ ಅಕ್ಮಲ್ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ವಾರ್ಡ್ ನಂ 33 ರ ಕಾರ್ಪೊರೇಟರ್ ಬಷೀರ್ ಅಹಮದ್,KMDC ಅಧ್ಯಕ್ಷ ಅಲ್ತಾಫ್ ಸೇರಿದಂತೆ 5 ಮಂದಿ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.ಕಾರ್ಪೊರೇಟರ್ ಬಷೀರ್ ಅಹಮದ್,ಈತನ ಪುತ್ರ ಫೈಜಾನ್ ಅಹಮದ್,ಅಲ್ತಾಫ್ ಖಾನ್,ಪರ್ವೀಜ್ ಹಾಗೂ ಇಬ್ರಾಹಿಂ ವಿರುದ್ದ ಕೊಲೆ ಮಾಡಿಸಿರುತ್ತಾರೆ ಎಂದು ಆರೋಪಿಸಿ ಮೃತ ಅಕ್ಮಲ್ ಪತ್ನಿ ನಜಿಯಾ ಪ್ರಕರಣ ದಾಖಲಿಸಿದ್ದಾರೆ.
ಮಾರ್ಚ್ 8 ರಂದು ರಾತ್ರಿ 8.30 ರಲ್ಲಿ ರಾಜೀವ್ ನಗರದ ಆರ್ಯಬೇಕರಿ ಬಳಿ ಅಕ್ಮಲ್ ರನ್ನ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿತ್ತು.ಈ ಸಂಭಂಧ ಉದಯಗಿರಿ ಠಾಣೆ ಪೊಲೀಸರು 5 ಮಂದಿ ವಿರುದ್ದ ಕೊಲೆ ಆರೋಪ ಪ್ರಕರಣ ದಾಖಲಿಸಿದ್ದಾರೆ.
ಶಾಂತಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್ ತೆರುವುಗೊಳಿಸುವಂತೆ ಅಕ್ಮಲ್ ನಗರಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು.ನಂತರ ರಾತ್ರಿ ಜೆಡ್ ಮಾರ್ಕ್ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ಅಲ್ತಾಫ್ ಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಈ ವೇಳೆ ಬಷೀರ್ ಹಾಗೂ ಅಲ್ತಾಫ್ ರವರು ಅಕ್ಮಲ್ ಗೆ ಅವಾಚ್ಯ ಶಭ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು.ಇದಕ್ಕೆ ಜಗ್ಗದ ಅಕ್ಮಲ್ ಬಷೀರ್ ಹಾಗೂ ಅಲ್ತಾಫ್ ವಿರುದ್ದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.ನಂತರ ಅಲ್ತಾಫ್ ಗೆ ಕೊಲೆ ಬೆದರಿಕೆಗಳು ಬಂದಿತ್ತು.ಅಲ್ಲದೆ ಬಷೀರ್ ಹಾಗೂ ಅಲ್ತಾಫ್ ಬೆದರಿಕೆ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಹೀಗಾಗಿ ತನ್ನ ಪತಿ ಅಕ್ಮಲ್ ರವರ ಕೊಲೆ ಹಿಂದೆ ಬಷೀರ್ ಅಹಮದ್,ಅಲ್ತಾಫ್ ಖಾನ್,ಪರ್ವೀಜ್,ಇಬ್ರಾಹಿಂ ಹಾಗೂ ಫೈಜಲ್ ಅಹಮದ್ ರವರ ಕೈವಾಡ ಇದೆ ಎಂದು ಆರೋಪಿಸಿ ನಜಿಯಾ ಪ್ರಕರಣ ದಾಖಲಿಸಿದ್ದಾರೆ…