ಸ್ನೇಹಿತೆಗೆ ಆಮಿಷವೊಡ್ಡಿ ಧೋಖಾ…21 ಲಕ್ಷ ನಗದು ಹಾಗೂ ಕಾರು ಜೊತೆ ವಂಚಕ ನಾಪತ್ತೆ…ಮೂವರ ವಿರುದ್ದ FIR ದಾಖಲು…

ಮೈಸೂರು,ಮಾ15,Tv10 ಕನ್ನಡ

ಕುಟುಂಬಸ್ಥರಿಗೆ ಸರ್ಕಾರಿ ಕೆಲಸ ಕೊಡಿಸುವುದು ಸೇರಿದಂತೆ ಹಲವು ಆಮಿಷವೊಡ್ಡಿದ ಯುವಕ ತನ್ನ ಸ್ನೇಹಿತೆಯನ್ನ ವಂಚಿಸಿದ ಪ್ರಕರಣವೊಂದು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳವಾಡಿಯಲ್ಲಿ ಬೆಳಕಿಗೆ ಬಂದಿದೆ.ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಯುವತಿ ಸುಪ್ರಿಯಾ ಎಂಬುವರಿಗೆ ಬರೋಬರಿ ವಿವಿದ ಹಂತಗಳಲ್ಲಿ 21 ಲಕ್ಷ ನಗದು ಹಾಗೂ ಕಾರು ಪಡೆದು ವಂಚಿಸಿದ್ದಾನೆ.ಸಂದೀಪ್ ಕುಮಾರ್ ಹಾಗೂ ಈತನ ಸ್ನೇಹಿತರಾದ ಮನೋಜ್ ಕುಮಾರ್ ಮತ್ತು ಪುನೀತ್ ಎಂಬುವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಸುಮಾರು 8 ವರ್ಷಗಳ ಹಿಂದೆ ಸುಪ್ರಿಯಾಗೆ ಸಂದೀಪ್ ಕುಮಾರ್ ಪರಿಚಯವಾಗಿದ್ದಾನೆ.ಯಾವುದೋ ವ್ಯವಹಾರ ಮಾಡುವುದಾಗಿ ನಂಬಿಸಿ ಸುಪ್ರಿಯಾ ರಿಂದ 10 ಲಕ್ಷ ಪಡೆದಿದ್ದಾನೆ.ನಂತರ ಈತನ ಸ್ನೇಹಿತ ಮನೋಜ್ ಕುಮಾರ್ ಎಂಬಾತ ತನ್ನ ಮನೆಯಿಂದ ಚಿನ್ನದ ಒಡವೆಗಳನ್ನ ಕಳುವು ಮಾಡಿ ಸಂದೀಪ್ ಕುಮಾರ್ ಗೆ ಕೊಟ್ಟಿದ್ದಾನೆ.ಅದೇ ಒಡವೆಗಳನ್ನ ಸುಪ್ರಿಯಾ ಹೆಸರಲ್ಲಿ ಸಂದೀಪ್ ಕುಮಾರ್ ಆಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಗಿರವಿ ಇರಿಸಿದ್ದಾನೆ.ಮನೋಜ್ ಕುಮಾರ್ ಮನೆಯವರು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದಾಗ ಸುಪ್ರಿಯಾ ಬಳಿಯಿಂದ ಸಂದೀಪ್ ಕುಮಾರ್ 8.5 ಲಕ್ಷ ಪಡೆದು ಸೆಟಲ್ ಮಾಡಿದ್ದಾನೆ.ಈ ಮಧ್ಯೆ ಸುಪ್ರಿಯಾ ಮನೆಯವರಿಗೆ ಸರ್ಕಾರಿ ಕೆಲಸ ಕೊಡಿಸುವ ಆಮಿಷ ತೋರಿಸಿ 2.5 ಲಕ್ಷ ಪೀಕಿದ್ದಾನೆ.ಇಷ್ಟಕ್ಕೂ ಸಾಲದೆಂಬಂತೆ ಸುಪ್ರಿಯಾ ಖರೀದಿಸಿದ್ದ ಕಾರು ಪಡೆದು ನಾಪತ್ತೆಯಾಗಿದ್ದಾನೆ.ಹಣ ಹಾಗೂ ಕಾರು ಹಿಂದಿರುಗಿಸುವಂತೆ ಒತ್ತಾಯಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.ಈ ವಿಚಾರ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ.ಇವೆಲ್ಲಾ ವಂಚನೆಗೆ ಪುನೀತ್ ಎಂಬಾತ ಸಹಕರಿಸಿದ್ದಾನೆಂದು ಆರೋಪಿಸಿರುವ ಸುಪ್ರಿಯಾ ಮೂವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಟೋಲ್ ನಲ್ಲಿ ರಾಜಕೀಯ ಪುಡಾರಿಗಳ ಪುಂಡಾಟ…ಮಹಿಳಾ ಸಿಬ್ಬಂದಿಯನ್ನ ಎಳೆದಾಡಿ ರಂಪಾಟ…

ಟೋಲ್ ನಲ್ಲಿ ರಾಜಕೀಯ ಪುಡಾರಿಗಳ ಪುಂಡಾಟ…ಮಹಿಳಾ ಸಿಬ್ಬಂದಿಯನ್ನ ಎಳೆದಾಡಿ ರಂಪಾಟ…

ಮಂಡ್ಯ,ನ22,Tv10 ಕನ್ನಡ ಬೆಂಗಳೂರು ಮೈಸೂರು ಹೈವೇ ಟೋಲ್ ನಲ್ಲಿ ರಾಜಕೀಯ ಪುಡಾರಿಗಳು ನಡೆಸಿದ ಪುಂಡಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಟೋಲ್ ದುಡ್ಡು ಕಟ್ಟದೇ ಸಿಬ್ಬಂದಿಗಳ ವಿರುದ್ದ ತಿರುಗಿ ಬಿದ್ದಿದ್ದಾರೆ.ಟೋಲ್ ಕಟ್ಟಿ…
ವಕ್ಫ್ ಬೋರ್ಡ್ ಆಸ್ತಿ ವಿವಾದ…ಮೈಸೂರಿನಲ್ಲಿ ಬಿಜೆಪಿ ಯಿಂದ ಪ್ರತಿಭಟನೆ…

ವಕ್ಫ್ ಬೋರ್ಡ್ ಆಸ್ತಿ ವಿವಾದ…ಮೈಸೂರಿನಲ್ಲಿ ಬಿಜೆಪಿ ಯಿಂದ ಪ್ರತಿಭಟನೆ…

ಮೈಸೂರು,ನ22,Tv10 ಕನ್ನಡ ರಾಜ್ಯದಲ್ಲಿ ವಖ್ಫ್ ಬೋರ್ಡ್ ಆಸ್ತಿ ವಿವಾದ ತಾರಕಕ್ಕೆ ಏರುತ್ತಿದೆ.ರಾಜ್ಯ ಸರ್ಕಾರದ ವಿರುದ್ಧ ಮೈಸೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದೆ.ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ವತಿಯಿಂದ…
ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ…ಓರ್ವನ ಬಂಧನ…ವಾಣಿಜ್ಯ ಹಾಗೂ ಗೃಹಬಳಕೆಯ 119 ಸಿಲಿಂಡರ್ ಸೀಜ್…

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ…ಓರ್ವನ ಬಂಧನ…ವಾಣಿಜ್ಯ ಹಾಗೂ…

ಮೈಸೂರು,ನ21,Tv10 ಕನ್ನಡ ಸಿಸಿಬಿ ಹಾಗೂ ಸರಸ್ವತಿಪುರಂ ಠಾಣೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ನಡೆಸುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ ನಡೆಸಿ ಓರ್ವನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…

Leave a Reply

Your email address will not be published. Required fields are marked *