ಜೈನತೀರ್ಥಂಕರ ವಿಗ್ರಹಗಳನ್ನ ಮಾಡಿಕೊಡುವುದಾಗಿ ವಂಚನೆ…ಜಬಲ್ ಪುರದ ಮಾರ್ಬಲ್ ವ್ಯಾಪಾರಿ ವಿರುದ್ದ ಪ್ರಕರಣ ದಾಖಲು…
- TV10 Kannada Exclusive
- March 15, 2024
- No Comment
- 176
ಮೈಸೂರು,ಮಾ15,Tv10 ಕನ್ನಡ
ಜೈನತೀರ್ಥಂಕರ ವಿಗ್ರಹಗಳನ್ನ ಮಾಡಿಕೊಡುವುದಾಗಿ ನಂಬಿಸಿ ಮಧ್ಯಪ್ರದೇಶ ಜಬಲ್ ಪುರದ ಮಾರ್ಬಲ್ ವ್ಯಾಪಾರಿಯೊಬ್ಬ ಮೈಸೂರಿನ ಶಾಂತಿನಾಥ ಸೇವಾ ಸಮಿತಿ ಪದಾಧಿಕಾರಿಗಳನ್ನ ವಂಚಿಸಿದ್ದಾನೆ.ವ್ಯಾಪಾರಿಯ ಮಾತುಗಳನ್ನ ನಂಬಿ ಪದಾಧಿಕಾರಿಗಳು 3.31 ಲಕ್ಷ ಹಣ ಕೊಟ್ಟು ವಂಚನೆಗೆ ಒಳಗಾಗಿದ್ದಾರೆ.ಈ ಸಂಭಂಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಮಧ್ಯಪ್ರದೇಶದ ಜಬಲ್ ಪುರದ ಮಹಾವೀರ್ ಮಾರ್ಬಲ್ ಮತ್ತು ಮೂರ್ತಿ ಆರ್ಟ್ ನ ಮಾಲೀಕ ವಿಕಾಸ್ ಜೈನ್ ಎಂಬಾತನ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.ಶಾಂತಿನಾಥ ಸೇವಾ ಸಮಿತಿಯವರು ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಕೋಟಿ ಶ್ರೀಶಾಂತಿನಾಥ ಬಸದಿಯಲ್ಲಿ ಜೈನ ತೀರ್ಥಂಕರಗಳನ್ನ ಪ್ರತಿಷ್ಠಾಪಿಸಲು ನಿರ್ಧರಿಸಿದ್ದಾರೆ.ಇತ್ತೀಚೆಗರ ನಡೆದ ಚಾತುರ್ಮಾಸ ಪೂಜೆ ವೇಳೆ ಜೈನ ಮುನಿಗಳ ಕಾರ್ಯಕ್ರಮಕ್ಕ ಜಬಲ್ ಪುರದಿಂದ ಬಂದಿದ್ದ ವಿಕಾಸ್ ಜೈನ್ ಶಾಂತಿನಾಥ ಸೇವಾ ಸಮಿತಿ ಪದಾಧಿಕಾರಿಗಳನ್ನ ಭೇಟಿಯಾಗಿ ತಾನು ಮಾರ್ಬಲ್ ವ್ಯಾಪಾರಿ ವಿಗ್ರಹಗಳನ್ನ ಕೆತ್ತನೆ ಮಾಡಿಕೊಡುವುದಾಗಿ ನಂಬಿಸಿದ್ದಾನೆ.ಈತನ ಮಾತುಗಳನ್ನ ನಂಬಿದ ಸಮಿತಿ ಸದಸ್ಯರು 8 ವಿಗ್ರಹಗಳು,ಫ್ರೇಂಗಳು ಹಾಗೂ ಮಾನಸ್ಥಂಭದ ಪೀಠದ ಕಲ್ಲುಗಳನ್ನ 8,61,000/- ರೂ ವೆಚ್ಚದಲ್ಲಿ ಮಾಡಿಕೊಡುವುದಾಗಿ ನಂಬಿಸಿದ್ದಾನೆ.ಮುಂಗಡವಾಗಿ ವಿಕಾಸ್ ಜೈನ್ ಗೆ 1,11,000/- ಪಾವತಿಸಿದ್ದಾರೆ.ಕೆಲವು ದಿನಗಳ ನಂತರ ವಿಗ್ರಹಗಳು ತಯಾರಾಗುತ್ತಿರುವ ಫೋಟೋಗಳನ್ನ ತೋರಿಸಿ 2,20,000/- ರೂ ಪಡೆದಿದ್ದಾನೆ.ನಂತರ ಸಮಿತಿಯವರ ಕೈಗೆ ಸಿಗದೆ ಕಣ್ಣಾಮುಚ್ಚಾಲೆ ಆಟವಾಡಿದ್ದಾನೆ.ಸ್ವಿಚ್ ಮಾಡುವುದು,ಸುಳ್ಳು ಕಾರಣಗಳನ್ನ ನೀಡಿ ವಿಗ್ರಹಗಳನ್ನ ನೀಡದೆ ವಂಚಿಸಿದ್ದಾನೆ.ಈ ಬಗ್ಗೆ ಒತ್ತಡ ಹೇರಿದಾಗ ಬೇಜವಾಬ್ದಾರಿಯಿಂದ ವರ್ತಿಸಿ ಹಣ ವಂಚಿಸಿದ್ದಾನೆ.ಸಧ್ಯ ವಿಕಾಸ್ ಜೈನ್ ವಿರುದ್ದ ಶಾಂತಿನಾಥ ಸೇವಾ ಸಮಿತಿಯ ಖಜಾಂಚಿ ಮಹೇಶ್ ಪ್ರಸಾದ್ ರವರು ಕೆ.ಆರ್.ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ…