ಆನ್ ಲೈನ್ ಧೋಖಾ: 19 ಕೋಟಿ ಆಮಿಷ ತೋರಿಸಿ 99.50 ಲಕ್ಷಕ್ಕೆ ಉಂಡೆನಾಮ…
- TV10 Kannada Exclusive
- April 25, 2024
- No Comment
- 292
ಮೈಸೂರು,ಏ25,Tv10 ಕನ್ನಡ
ಸ್ಟಾಕ್ಸ್ ಟ್ರೇಡಿಂಗ್ ವ್ಯವಹಾರದಲ್ಲಿ 19 ಕೋಟಿ ಲಾಭಾಂಶ ತೋರಿಸಿ 99.50 ಲಕ್ಷ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.ಮೈಸೂರಿನ ಕನಕದಾಸ ನಗರದ ನಿಚಾಸಿ ಚಿದಾನಂದ್ ಎಂಬುವರು 99.50 ಲಕ್ಷ ಹಣ ಕಳೆದುಕೊಂಡಿದ್ದಾರೆ.ಇನ್ಸ್ಟಾಗ್ರಾಂ ನಲ್ಲಿ ಬಂದ ಜಾಹಿರಾತಿಗೆ ಆಕರ್ಷಿತರಾದ ಚಿದಾನಂದ್ ಲಿಂಕ್ ಓಪನ್ ಮಾಡಿ ಜಾಯಿನ್ ಆಗಿದ್ದಾರೆ.ಚಿದಾನಂದ್ ಅವರನ್ನ ವಾಟ್ಸಾಪ್ ಗ್ರೂಪ್ ಗೆ ಸೇರಿಸಿ ಲಿಂಕ್ ಕಳುಹಿಸಿ ಅಪ್ಲಿಕೇಷನ್ ಇನ್ಸ್ಟಾಲ್ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.ನಂತರ ವಂಚಕರ ಸಲಹೆಯಂತೆ ಪ್ರಾರಂಭದಲ್ಲಿ 60 ಸಾವಿರ ಇನ್ವೆಸ್ಟ್ ಮಾಡಿದ್ದಾರೆ.ಈ ಹೂಡಿಕೆಗೆ 1695/ ರೂ ಲಾಭಾಂಶ ಬಂದಿದೆ.ನಂತರ ವಿವಿದ ಹಂತಗಳಲ್ಲಿ ಚಿದಾನಂದ್ 99.50 ಲಕ್ಷ ಹಣ ಹೂಡಿದ್ದಾರೆ.ಕೆಲವೇ ದಿನಗಳಲ್ಲಿ 19 ಕೋಟಿ ಪ್ರಾಫಿಟ್ ತೋರಿಸಲಾಗಿದೆ.ಹಣ ಡ್ರಾ ಮಾಡಿಕೊಳ್ಳಲು ಮುಂದಾದ ಚಿದಾನಂದ್ ಗೆ ರೆಕಮೆಂಡ್ ಶುಲ್ಕ ಪಾವತಿಸುವಂತೆ ತಿಳಿಸಿದ್ದಾರೆ.ಈ ವೇಳೆ ತಾವು ವಂಚನೆಗೆ ಒಳಗಾಗಿರುವುದು ಖಚಿತವಾಗಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…