ಕುವೆಂಪುನಗರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…ಸರಗಳ್ಳನ ಬಂಧನ…3.30 ಲಕ್ಷ ಮೌಲ್ಯದ ಸರ ವಶ…
- TV10 Kannada Exclusive
- April 24, 2024
- No Comment
- 697
ಮೈಸೂರು,ಏ24,Tv10 ಕನ್ನಡ
ವಾಕಿಂಗ್ ಮಾಡುತ್ತಿದ್ದ ವೃದ್ದೆಯ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಕುವೆಂಪುನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಚಾಮರಾಜನಗರ ನಿವಾಸಿ ರಂಗಸ್ವಾಮಿ ಸಿಕ್ಕಿಬಿದ್ದ ಸರಗಳ್ಳ.ಬಂಧಿತನಿಂದ 3.30 ಲಕ್ಷ ಮೌಲ್ಯದ 55 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಏಪ್ರಿಲ್ 23 ರ ಬೆಳಿಗ್ಗೆ ಮಧುವನ ಪಾರ್ಕ್ ಬಳಿ ಮಹದೇವಮ್ಮ ಎಂಬ ವೃದ್ದೆ ವಾಕಿಂಗ್ ಮಾಡುತ್ತಿದ್ದಾಗ ಬೈಕ್ ನಲ್ಲಿ ಬಂದ ರಂಗಸ್ವಾಮಿ ಚಿನ್ನದ ಸರ ಕಸಿದು ಪರಾರಿಯಾಗಿದ್ದ.ಅದೇ ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಗಳಾದ ಶ್ರೀನಿವಾಸ್ ಹಾಗೂ ಮುಕುಂದೇಗೌಡ ರವರು ದೇವಯ್ಯನಹುಂಡಿ ಬಳಿಯ ಕಲ್ಯಾಣಮಂಟಪದ ಸಮೀಪ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಿದ್ದ ರಂಗಸ್ವಾಮಿಯನ್ನ ವಶಕ್ಕೆ ಪಡೆದು ಆತನ ಬೆರಳಚ್ಚು ಮುದ್ರೆಗಳನ್ನ ಪರಿಶೀಲಿಸಿದಾಗ ಹಳೇ ಕಳ್ಳ ಎಂದು ಧೃಢಪಟ್ಟಿದೆ.ವಿಚಾರಣೆಗರ ಒಳಪಡಿಸಿದಾಗ ವೃದ್ದೆಯ ಸರ ಕಿತ್ತು ಪರಾರಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಕೆ.ಆರ್.ವಿಭಾಗದ ಎಸಿಪಿ ರಮೇಶ್ ಕುಮಾರ್ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಪಿಐ ಯೋಗೇಶ್ ನೇತೃತ್ವದಲ್ಲಿ ಪಿಎಸ್ಸೈ ಗಳಾದ ಗೋಪಾಲ್,ಕು.ರಾಧ ಮತ್ತು ಸಿಬ್ಬಂದಿಗಳಾದ ಮಂಜುನಾಥ್,ಆನಂದ್,ಹಜರತ್ ಆಲಿ,ಸುರೇಶ್ ಹಾಗೂ ನಾಗೇಶ್ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ
ನಗರಪೊಲೀಸ್ ಆಯುಕ್ತ ಬಿ.ರಮೇಶ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ರವರು ಕಾರ್ಯಾಚರಣೆಯನ್ನ ಪ್ರಶಂಸಿಸಿದ್ದಾರೆ…