ಅಭ್ಯರ್ಥಿಗಳ ಪಟ್ಟಿಯಲ್ಲಿ ಎಡವಟ್ಟು…ಕನ್ನಡಕ್ಕೆ ಅಪಮಾನ…
- TV10 Kannada Exclusive
- April 26, 2024
- No Comment
- 527
ಮೈಸೂರು,ಏ26,Tv10 ಕನ್ನಡ
ಮೈಸೂರು ಕೊಡಗು ಲೋಸಭಾ ಕ್ಷೇತ್ರದ ಉಮೇದುದಾರರ ಪಟ್ಟಿಯಲ್ಲಿ ಅಧಿಕಾರಿಗಳ ಎಡವಟ್ಟು ಬೆಳಕಿಗೆ ಬಂದಿದೆ.ಅಕ್ಷರಗಳ ಬಳಕೆ ಸರಿಯಾಗದೆ ಕನ್ನಡಕ್ಕೆ ಅಪಮಾನ ಮಾಡಲಾಗಿದೆ. ಕಾಂಗ್ರೆಸ್ ಎಂಬ ಪದಕ್ಕೆ ಬದಲಾಗಿ ಕಾಂಗ್ರೆ ಷ್ ಎಂದು ನಮೂದಿಸಲಾಗಿದೆ.ಮತ್ತೊಂದೆಡೆ ಕಾಂಗ್ರೆಸ್ ಬದಲಾಗಿ ಕಾಂಗ್ರೆ ಶ್.ಮತ್ತೊಂದೆಡೆ ಹಲಸಿನ ಹಣ್ಣು ಪದಕ್ಕೆ ಹ ಳ ಸಿನ ಹಣ್ಣು ಎಂದು ದಾಖಲಾಗಿದೆ.ಇವೆಲ್ಲಾ ಕೈಬರಹದಲ್ಲಿ ದಾಖಲಾಗಿರುವ ಎಡವಟ್ಟು.ಕನ್ನಡ ಬಾರದ ಅಧಿಕಾರಿ ಅಥವಾ ಸಿಬ್ಬಂದಿಯಿಂದ ದಾಖಲಾದ ಕೈಬರವಣಿಗೆಯಲ್ಲಿ ಎಡವಟ್ಟುಗಳಿದ್ದರೂ ಕನ್ನಡ ಬಲ್ಲ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಶೋಚನೀಯ…