ನಿಷೇಧಿತ ಪ್ಲಾಸ್ಟಿಕ್ ವಿರುದ್ದ ಪಾಲಿಕೆ ಸಮರ…1513 ಕೆಜಿ ಪ್ಲಾಸ್ಟಿಕ್ ವಶ…1.61 ಲಕ್ಷ ದಂಡ ವಸೂಲಿ…
- TV10 Kannada Exclusive
- May 17, 2024
- No Comment
- 151
ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ದ ಮೈಸೂರು ಮಹಾನಗರ ಪಾಲಿಕೆ ಸಮರ ಸಾರಿದೆ.ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುವ ಉದ್ಯಮಿಗಳಿಗೆ ಬಿಸಿ ಮುಟ್ಟಿಸಿದೆ.ನಿನ್ನೆ 9 ವಲಯ ಕಚೇರಿ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 1513 ಕೆಜಿ ನಿಷೇಧಿತ ಪ್ಕಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ.ಅಲ್ಲದೆ 1,61,000/- ದಂಡ ವಿಧಿಸಲಾಗಿದೆ.ಧನ್ವಂತ್ರಿ ರಸ್ತೆಯಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿದಾಗ 1400kgs ನಿಷೇಧಿತ ಪ್ಲಾಸ್ಟಿಕ್ ಸಂಗ್ರಹಿಸಿರುವುದು ಪತ್ತೆಯಾಗಿದೆ.ಪಾಲಿಕೆ ಆಯುಕ್ತರ ಆದೇಶದಂತೆ ವಲಯ ಆಯುಕ್ತರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸಂತೆಪೇಟೆಯ ಮಲ್ಲೇಶ್ ಎಂಬ ಮಾಲೀಕರಿಗೆ ಸೇರಿದ ದನ್ವಂತ್ರಿ ಎಂಟರ್ಪ್ರೈಸಸ್ ನ ಗೋದಾಮಿನ ಮೇಲೆ ದಾಳಿ ನಡೆಸಿ ಸಂಗ್ರಹಿಸಿದ್ದ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ರೂ -25,000/- ದಂಡ ವಿಧಿಸಲಾಗಿದೆ. ಹಾಗೂ ಸದರಿ ಅಂಗಡಿಯ ಟ್ರೇಡ್ ಲೈಸನ್ಸ್ ರದ್ದುಪಡಿಸಲು ಆದೇಶ ನೀಡಲಾಗಿದೆ. ಸ್ಥಳದಲ್ಲಿ ಪರಿಸರ ಅಭಿಯಂತರರಾದ ಮೈತ್ರಿ, ಹೆಲ್ತ್ ಇನ್ಸ್ಪೆಕ್ಟರ್ ಗಳಾದ ಕೃಷ್ಣ ,ಧನಂಜಯ ಗೌಡ,ಮಂಜು ಕುಮಾರ್. ಬಸವರಾಜು, ಸ್ಯಾನಿಟರಿ ಸೂಪರ್ವೈಸರ್ ಗಳು ಹಾಗೂ ಅಭಯ ತಂಡ ಮತ್ತು ಪೋಲಿಸ್ ಸಿಬ್ಬಂದಿ ಹಾಜರಿದ್ದರು…