ಯಥಾಸ್ಥಿತಿಗೆ ಮರಳಿದ ಮೈಸೂರು ಶವಾಗಾರ ಶೀತಲ ಯಂತ್ರಗಳು…Tv10 ವರದಿ ಫಲಶೃತಿ…ನಿಟ್ಟುಸಿರು ಬಿಟ್ಟ ಸಿಬ್ಬಂದಿ…
- TV10 Kannada Exclusive
- May 23, 2024
- No Comment
- 101
ಮೈಸೂರು,ಮೇ23,Tv10 ಕನ್ನಡ
ಮೈಸೂರು ಶವಾಗಾರ ಶೀತಲ ಯಂತ್ರಗಳಿಗೆ ಕೊನೆಗೂ ರಿಪೇರಿ ಭಾಗ್ಯ ದೊರೆತಿದೆ.ದುರಸ್ಥಿಗೆ ಬಂದಿದ್ದ ಮೂರು ಯಂತ್ರಗಳನ್ನ ಸರಿಪಡಿಸಿದ ಅಧಿಕಾರಿಗಳು ಯಥಾಸ್ಥಿತಿಗೆ ತರುವ ಮೂಲಕ ಅಲ್ಲಿನ ಸಿಬ್ಬಂದಿಗಳು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.ಇದು Tv10 ವರದಿ ಫಲಶೃತಿ.
ಕೆಲವು ದಿನಗಳ ಹಿಂದಷ್ಟೆ ಮೈಸೂರು ಮೆಡಿಕಲ್ ಕಾಲೇಜಿನ ಆವರಣದಲ್ಲಿರುವ ಶವಾಗಾರದ ಶೀತಲ ಯಂತ್ರಗಳು ಕೆಟ್ಟುನಿಂತ ಬಗ್ಗೆ Tv10 ವರದಿ ಮಾಡಿತ್ತು.ಮೂರು ಯಂತ್ರಗಳ ಪೈಕಿ ಎರಡು ಯಂತ್ರಗಳು ಕೈಕೊಟ್ಟ ಪರಿಣಾಮ ಮೃತದೇಹಗಳು ಕೊಳೆತು ದುರ್ನಾತ ಬೀರುತ್ತಿರುವ ಬಗ್ಗೆ ವರದಿ ಮಾಡಲಾಗಿತ್ತು.ಎಚ್ಚೆತ್ತ ಡೀನ್ ಡಾ.ದಾಕ್ಷಾಯಿಣಿ ರವರು ದುರಸ್ಥಿಗೆ ಬಂದ ಯಂತ್ರಗಳನ್ನ ಸುಸ್ಥಿತಿಗೆ ತಂದಿದ್ದಾರೆ.ಕೊಳೆತು ದುರ್ವಾಸನೆ ಬೀರುತ್ತಿದ್ದ ಮೃತದೇಹಗಳ ಮಧ್ಯೆ ಸಿಬ್ಬಂದಿಗಳು ಕೆಲಸ ಮಾಡಬೇಕಿತ್ತು.ಅಲ್ಲದೆ ಶವಪರೀಕ್ಷೆ ನಂತರ ಮೃತದೇಹಗಳನ್ನ ಕೊಂಡೊಯ್ಯಲು ಬರುತ್ತಿದ್ದ ಸಂಭಂಧಿಕರಿಗೂ ದುರ್ವಾಸನೆ ಕಿರಿಕಿರಿ ಮಾಡುತ್ತಿತ್ತು.ಈ ಬಗ್ಗೆ Tv10 ಕನ್ನಡ ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು.ಸಧ್ಯ ಇದೀಗ ಶೀತಲ ಯಂತ್ರಗಳಿಗೆ ರಿಪೇರಿ ಭಾಗ್ಯ ದೊರೆತಿದೆ.ಇದೀಗ ಮೃತದೇಹಗಳು ಕೊಳೆಯದಂತೆ ಸಂರಕ್ಷಿಸಬಹುದಾಗಿದೆ. ಸಿಬ್ಬಂದಿಗಳೀಗ ನಿಟ್ಟುಸಿರು ಬಿಡುವಂತಾಗಿದೆ…