ಯರಗನಹಳ್ಳಿ ಅನಿಲಸೋರಿಕೆ ದುರಂತ…ಕುಟುಂಬಕ್ಕೆ ಸಾಂತ್ವನ ತಿಳಿಸಿದ ಸಿಎಂ ಸಿದ್ದರಾಮಯ್ಯ…

ಯರಗನಹಳ್ಳಿ ಅನಿಲಸೋರಿಕೆ ದುರಂತ…ಕುಟುಂಬಕ್ಕೆ ಸಾಂತ್ವನ ತಿಳಿಸಿದ ಸಿಎಂ ಸಿದ್ದರಾಮಯ್ಯ…

ಮೈಸೂರು,ಮೇ23,Tv10 ಕನ್ನಡ

ಮೈಸೂರಿನ ಯರಗನಹಳ್ಳಿಯಲ್ಲಿ ಅನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ
ಘಟನಾ ಸ್ಥಳಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಕುಮಾರಸ್ವಾಮಿ ಅವರ ಇಡೀ ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ.
ಅವರ ಪತ್ನಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಗ್ಯಾಸ್ ಲೀಕ್ ಆಗಿ
ಅವರ ಇಡೀ ಕುಟುಂಬ ನಾಶವಾಗಿದೆ.ಗಂಡ ಹೆಂಡತಿ ಇಬ್ಬರು ಒಳಗೆ ಮಲಗಿದ್ದರು.ಇಬ್ಬರು ಮಕ್ಕಳು ಹೊರಗಡೆ ಹಾಲ್ ನಲ್ಲಿ ಮಲಗಿದ್ದರು.
ಎಲ್ಲರೂ ಕೂಡ ನಿದ್ರೆಯಲ್ಲೇ ಪ್ರಾಣ ಬಿಟ್ಟಿದ್ದಾರೆ.ಅವರ ತಂದೆ ಮೂಲತಃ ಚಿಕ್ಕಮಗಳೂರಿನ ಕಡೂರಿನವರು.ಇವರು ಮೈಸೂರಿಗೆ ಬಂದು 20 ವರ್ಷವಾಗಿದೆ.ಚಿಕ್ಕಮನೆಯಲ್ಲಿ ವಾಸವಾಗಿದ್ದರು.
ಅವರ ಕುಟುಂಬಸ್ತರೆಲ್ಲ ಇದೇ ಮೊಹಲ್ಲಾದ ನಿವಾಸಿಗಳಾಗಿದ್ದಾರೆ.
ನಾನು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ.ಮೃತಪಟ್ಟ ನಾಲ್ವರನ್ನು ಸೇರಿ ತಲಾ 3 ಲಕ್ಷದಂತೆ ಒಟ್ಟು 12 ಲಕ್ಷ ಪರಿಹಾರವನ್ನು ಸಚಿವ ಮಹದೇವಪ್ಪ ಘೋಷಿಸಿದ್ದರು.
ಅದಕ್ಕೆ ನಾನು ಅನುಮೋದನೆ ನೀಡಿದ್ದೇನೆ.
ಮೃತರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಮತ್ತು
ಅವರ ಆತ್ಮಕ್ಕೆ ಶಾಂತಿ ದೊರಕಲಿ.
ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಹೇಳಿದ್ದಾರೆ…

Spread the love

Related post

ಜೂನ್ 21 ವಿಶ್ವಯೋಗ ದಿನಾಚರಣೆ… ಅರ್ಥಪೂರ್ಣವಾಗಿ ಆಚರಣೆ…ಸಂಸದ ಯದುವೀರ್.

ಜೂನ್ 21 ವಿಶ್ವಯೋಗ ದಿನಾಚರಣೆ… ಅರ್ಥಪೂರ್ಣವಾಗಿ ಆಚರಣೆ…ಸಂಸದ ಯದುವೀರ್.

ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಅರಮನೆ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಮೈಸೂರು ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತರಾಜ್ ಒಡೆಯರ್ ಅವರು ತಿಳಿಸಿದ್ದಾರೆ. ಇಂದು…
ಜೂನ್ 21 ವಿಶ್ವಯೋಗ ದಿನಾಚರಣೆ… ಅರ್ಥಪೂರ್ಣವಾಗಿ ಆಚರಣೆ…ಸಂಸದ ಯದುವೀರ್…

ಜೂನ್ 21 ವಿಶ್ವಯೋಗ ದಿನಾಚರಣೆ… ಅರ್ಥಪೂರ್ಣವಾಗಿ ಆಚರಣೆ…ಸಂಸದ ಯದುವೀರ್…

ಮೈಸೂರು,ಜೂ14,Tv10 ಕನ್ನಡ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಅರಮನೆ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಮೈಸೂರು ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತರಾಜ್ ಒಡೆಯರ್ ಅವರು…
ಗರ್ಭಿಣಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥತಿಯಲ್ಲಿ ಮೃತದೇಹ ಪತ್ತೆ…

ಗರ್ಭಿಣಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥತಿಯಲ್ಲಿ ಮೃತದೇಹ ಪತ್ತೆ…

ಮೈಸೂರು,ಜೂ13,Tv10 ಕನ್ನಡ ಏಳು ತಿಂಗಳ ಹಿಂದೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಎರಡು ತಿಂಗಳ ಗರ್ಭಿಣಿಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮೈಸೂರಿನ ಮಾನಸಿನಗರದ ಬಡಾವಣೆಯಲ್ಲಿ ನಡೆದಿದೆ.ಸೌಮ್ಯಶ್ರೀ(24) ಮೃತ…

Leave a Reply

Your email address will not be published. Required fields are marked *