ದತ್ತ ವೆಂಕಟೇಶ್ವರನ ದೇವಾಲಯದಲ್ಲಿ ಕುಂಭಾಭಿಷೇಕ…ಸಹಸ್ರಾರು ಭಕ್ತರು ಭಾಗಿ…ಗಣಪತಿ ಶ್ರೀಗಳಿಂದ ಅಭಿಷೇಕ…

ದತ್ತ ವೆಂಕಟೇಶ್ವರನ ದೇವಾಲಯದಲ್ಲಿ ಕುಂಭಾಭಿಷೇಕ…ಸಹಸ್ರಾರು ಭಕ್ತರು ಭಾಗಿ…ಗಣಪತಿ ಶ್ರೀಗಳಿಂದ ಅಭಿಷೇಕ…

ಮೈಸೂರು,ಮೇ24,Tv10ಕನ್ನಡ

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿರುವ ದತ್ತವೆಂಕಟೇಶ್ವರ ದೇವಾಲಯದ 25 ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವ ಅಂಗವಾಗಿ ನೆರವೇರುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಇಂದು ವಿಜೃಂಭಣೆಯಿಂದ ಕುಂಭಾಭಿಷೇಕ ನೆರವೇರಿತು.ದೇವಾಲಯದ ಗೋಪುರದಲ್ಲಿರುವ ಶಿಖರದ ಮೇಲೆ ಆಗಮಿಕರ ಸಮ್ಮುಖದಲ್ಲಿ ವಿವಿದ ನದಿಗಳಿಂದ ಸಂಗ್ರಹಿಸಲಾದ ಶುದ್ದ ಜಲದಿಂದ ಗಣಪತಿ ಶ್ರೀಗಳು ಕುಂಭಾಭಿಷೇಕ ನೆರವೇರಿಸಿದರು.ಈ ವೇಳೆ ಹಿತವಚನ ನೀಡಿದ ಶ್ರೀಗಳು ಕ್ರೋಧ, ಮತ್ಸರ, ಕಷ್ಟ ಕೋಟಲೆಗಳು‌ ದೂರವಾಗಿ ಕಾಲ,ಕಾಲಕ್ಕೆ ಮಳೆ,ಬೆಳೆಯಾಗಿ ದೇಶ ಸುಭಿಕ್ಷವಾಗಲಿ ಎಂದು ಪ್ರಾರ್ಥಿಸಿದರು.
ಇದಕ್ಕೂ ಮುನ್ನ ವಜ್ರೋತ್ಸವ ಯಾಗಮಂಟಪದಲ್ಲಿ ಪ್ರಧಾನ‌ಯಾಗವನ್ನು‌ ನೆರವೇರಿಸಲಾಯಿತು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಮತ್ತು ಶ್ರೀ ದತ್ತ ವಿಜಯಾನಂದ ತೀರ್ಥ‌ ಸ್ವಾಮೀಜಿ‌ ಯವರು ಹೋಮಕಾರ್ಯದಲ್ಲಿ ಪಾಲ್ಗೊಂಡು‌ ಪೂರ್ಣಾಹುತಿ ಸಮರ್ಪಿಸಿದರು.ನಂತರ ಗಣಪತಿ ಶ್ರೀಗಳು ದೇವತಾ ಮೂರ್ತಿಗಳಿಗೆ ಬ್ರಹ್ಮಕಲಶ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *