ಶೀಲದ ಬಗ್ಗೆ ಅಪಪ್ರಚಾರ…ಗೃಹಿಣಿ ನೇಣಿಗೆ ಶರಣು…7 ಮಂದಿ ವಿರುದ್ದ FIR ದಾಖಲು…

ಶೀಲದ ಬಗ್ಗೆ ಅಪಪ್ರಚಾರ…ಗೃಹಿಣಿ ನೇಣಿಗೆ ಶರಣು…7 ಮಂದಿ ವಿರುದ್ದ FIR ದಾಖಲು…

ಮೈಸೂರು,ಮೇ28,Tv10 ಕನ್ನಡ

ಮಹಿಳೆಯ ಮೇಲೆ ಕಾಮದೃಷ್ಟಿಯಿಂದ ನೋಡುತ್ತಿದ್ದ ಕಿರಾತಕನೊಬ್ಬ ಆಕೆಯ ಶೀಲದ ಬಗ್ಗೆ ಅಪಪ್ರಚಾರ ಮಾಡಿದ ಪರಿಣಾಮ ಮನನೊಂದ ಗೃಹಿಣಿ ನೇಣಿಗೆ ಶರಣಾದ ಘಟನೆ ಮೈಸೂರಿನ ಗಾಂಧಿನಗರದಲ್ಲಿ ನಡೆದಿದೆ.ವಿಜಯಲಕ್ಷ್ಮಿ(40) ಮೃತ ಗೃಹಿಣಿ.ಘಟನೆಗೆ ಸಂಭಂಧಿಸಿದಂತೆ ಕಾಮದೃಷ್ಟಿ ಬೀರಿ ಅಪಪ್ರಚಾರ ಮಾಡಿದ ದಡದಹಳ್ಳಿ ಗ್ರಾಮದ ನಿವಾಸಿ ನಾಗರಾಜು ಸೇರಿದಂತೆ 7 ಮಂದಿ ವಿರುದ್ದ ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಲಕ್ಷ್ಮಿ ಹಾಗೂ ಕುಟುಂಬ ದಡದಹಳ್ಳಿ ಗ್ರಾಮದ ನಿವಾಸಿಗಳು.ಅದೇ ಗ್ರಾಮದ ನಾಗರಾಜು ಆಗಾಗ ವಿಜಯಲಕ್ಷ್ಮಿ ಮೇಲೆ ಕಾಮದೃಷ್ಟಿ ಬೀರಿ ಕಿರೀಕ್ ಮಾಡುತ್ತಿದ್ದ.ಪಾನಮತ್ತನಾಗಿ ವಿಜಯಲಕ್ಷ್ಮಿ ವಿರುದ್ದ ಅಪಪ್ರಚಾರ ಮಾಡುವುದು,ಬಹಿರಂಗವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ.ಈ ವಿಚಾರದಲ್ಲಿ ವಿಜಯಲಕ್ಷ್ಮಿ ಮಗ ಅಭಿ ಗಲಾಟೆ ಮಾಡಿದಾಗ ನಾಗರಾಜ್ ಸೇರಿದಂತೆ ಹಲವರು ಮನೆಗೆ ನುಗ್ಗಿ ಧ್ವಂಸ ಮಾಡಿದ್ದರು.ಈ ಗಲಾಟೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.ಈ ಹಿನ್ನಲೆ ವಿಜಯಲಕ್ಷ್ಮಿ ಕುಟುಂಬ ದಡದಹಳ್ಳಿ ಗ್ರಾಮಕ್ಕೆ ಪ್ರವೇಶ ಮಾಡದಂತೆ ನಿರ್ಭಂಧ ಹೇರಲಾಗಿದೆ.ಹೀಗಾಗಿ ವಿಜಯಲಕ್ಷ್ಮಿ ಕುಟುಂಬ ಶಿವಮೊಗ್ಗಕ್ಕೆ ತೆರಳಿದೆ.ಮೂರು ದಿನಗಳ ಹಿಂದೆ ತಮ್ಮ ಸ್ವಗ್ರಾಮ ದಡದಹಳ್ಳಿಗೆ ತೆರಳಲು ವಿಜಯಲಕ್ಷ್ಮಿ ಕುಟುಂಬ ಪ್ರಯತ್ನಿಸಿದೆ.ಇದಕ್ಕಾಗಿ ಗ್ರಾಮಾಂತರ ಠಾಣೆ ಪೊಲೀಸರ ನೆರವು ಕೋರಿದ್ದಾರೆ.ಗ್ರಾಮದ ಮುಖಂಡರ ಜೊತೆ ಕಡಕೊಳ ಗ್ರಾಮಕ್ಕೆ ತೆರಳುವಂತೆ ಗ್ರಾಮಾಂತರ ಠಾಣೆ ಪೊಲೀಸರು ಸೂಚಿಸಿದ್ದಾರೆ.ಈ ಸೂಚನೆ ಮೇರೆಗೆ ಕಡಕೊಳ ಪೊಲೀಸ್ ಠಾಣೆಗೆ ತೆರಳಿದಾಗ ನಾಗರಾಜ್ ಸೇರಿದಂತೆ ಹಲವರು ವಿರೋಧಿಸಿ ಮತ್ತೆ ವಿಜಯಲಕ್ಷ್ಮಿ ವಿರುದ್ದ ಅಪಪ್ರಚಾರ ಮಾಡಿ ಮಾನಸಿಕವಾಗಿ ಹಿಂಸಿಸಿದ್ದಾರೆ.ನಂತರ ಗ್ರಾಮಕ್ಕೆ ತೆರಳಲು ಸಾಧ್ಯವಾಗದೆ ಮೈಸೂರಿನ ಗಾಂಧಿನಗರದಲ್ಲಿರುವ ಸಂಭಂಧಿಕರ ಮನೆಯಲ್ಲಿ ತಂಗಿದ್ದಾರೆ.ಶೀಲದ ಬಗ್ಗೆ ಅಪಪ್ರಚಾರ ಮಾಡಿದ ಹಿನ್ನಲೆ ಮನನೊಂದ ವಿಜಯಲಕ್ಷ್ಮಿ ಗಾಂಧಿನಗರದ ಬಳಿ ಇರುವ ಸಿದ್ದಾರ್ಥ ಪಾರ್ಕ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ವಿಜಯಲಕ್ಷ್ಮಿ ಸಾವಿಗೆ ಅಪಪ್ರಚಾರ ಮಾಡಿದ ನಾಗರಾಜ್ ಸೇರಿದಂತೆ ರಾಜಮ್ಮ,ಗೋವಿಂದರಾಜು,ನಂಜುಂಡ,ನಾರಾಯಣ,ನಂಜಪ್ಪ ಹಾಗೂ ಸ್ವಾಮಿ ಎಂಬುವರ ವಿರುದ್ದ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…
ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…

Leave a Reply

Your email address will not be published. Required fields are marked *