ಡೀಸಲ್ ಇಂಜಿನ್ ಮತ್ತು ಜನರೇಟರ್ ಮೆಕ್ಯಾನಿಕ್ ಸಿದ್ದರಾಜು ಗೆ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ…
- TV10 Kannada Exclusive
- June 1, 2024
- No Comment
- 353
ಮೈಸೂರು,ಜೂ1,Tv10 ಕನ್ನಡ
ಮೈಸೂರು ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆಯ ವತಿಯಿಂದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಪ್ರಯುಕ್ತ ಇಂದು ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ವತಿಯಿಂದ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ಮಕಾಳಾ ಮಾತೃ ಸಂಸ್ಥೆಯಾದ ಶಿಲ್ಪ ಎಂಟರ್‌ಪ್ರೈಸಸ್ ನಲ್ಲಿ ಡಿಸೇಲ್ ಇಂಜಿನ್ ಮತ್ತು ಜನರೇಟರ್ ಮ್ಯಾಕನಿಕ್ ಆಗಿ 25 ವರ್ಷದಿಂದ ನಿರಂತರವಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಸಿದ್ಧರಾಜು ರವರಿಗೆ ‘ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ‘ ಪ್ರಧಾನ ಮಾಡಿ ಗೌರವಿಸಲಾಯಿತು .
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹೆಚ್ . ಸಿ .ಕಾಂತರಾಜು, ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಹೆಚ್ .ವೆಂಕಟೇಶ್ , ಎಮ್ . ಶಿವಕುಮಾರ್ , ಕಾರ್ಯದರ್ಶಿ ಸಿ .ಆರ್ .ದಿನೇಶ್, ಖಜಾಂಚಿ ಕೆ.ಟಿ ವಿಷ್ಣು , ವಲಯ ಅಧ್ಯಕ್ಷ ಕೆ. ಆರ್ ಭಾಸ್ಕರಾನಂದ ಉಪಸ್ಥಿತರಿದ್ದರು…