
ಪಾಲಿಕೆ ಸಿಬ್ಬಂದಿಗಳ ಕಾರ್ಯಾಚರಣೆ…ನಿಷೇಧಿತ ಪ್ಲಾಸ್ಟಿಕ್ ವಶ…50 ಸಾವಿರ ದಂಡ…
- TV10 Kannada Exclusive
- June 1, 2024
- No Comment
- 94
ಮೈಸೂರು,ಜೂ1,Tv10 ಕನ್ನಡ
ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪರಿಸರ ಅಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಕರು ಇಂದು ವಲಯ ಕಚೇರಿ 6 ರ ವಾರ್ಡ್ ನಂ 26 ರ ವ್ಯಾಪ್ತಿಯಲ್ಲಿ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.ಜಗನ್ಮೋಹನ ಅರಮನೆ ಬಳಿ ಇರುವ RGC ಟ್ರಾನ್ಸ್ಪೋರ್ಟ್ ಹಾಗೂ ನಾಲ್ಕು ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡಿರುವುದಲ್ಲದೆ ತಲಾ 10 ಸಾವಿರದಂತೆ 50 ಸಾವಿರ ದಂಡ ವಿಧಿಸಿದ್ದಾರೆ.ನಗರಪಾಲಿಕೆ ಆಯುಕ್ತರಾದ ಮಧು ರವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ…