
ಮೈಸೂರು ಪೊಲೀಸ್ ಪ್ರೀಮಿಯರ್ ಲೀಗ್…ಸಿಎಆರ್ ಕಿಂಗ್ಸ್ XI ವಿನ್ನರ್ಸ್…ಲಕ್ಷ್ಮಿಪುರಂ ಫೀನಿಕ್ಸ್ ರನ್ನರ್ ಅಪ್…
- TV10 Kannada Exclusive
- June 2, 2024
- No Comment
- 619

ಮೈಸೂರು ಪೊಲೀಸ್ ಪ್ರೀಮಿಯರ್ ಲೀಗ್…ಸಿಎಆರ್ ಕಿಂಗ್ಸ್ XI ವಿನ್ನರ್ಸ್…ಲಕ್ಷ್ಮಿಪುರಂ ಫೀನಿಕ್ಸ್ ರನ್ನರ್ ಅಪ್…
ಮೈಸೂರು,ಜೂ2,Tv10 ಕನ್ನಡ
ಮೈಸೂರು ಪೊಲೀಸ್ ಪ್ರೀಮಿಯರ್ ಲೀಗ್ ನ ಫೈನಲ್ ಮ್ಯಾಚ್ ಇಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಫೈರಿಂಗ್ ರೇಂಜ್ ಮೈದಾನದಲ್ಲಿ ರೋಚಕವಾಗಿ ನಡೆಯಿತು.ಫೈನಲ್ ತಲುಪಿದ ಸಿಎಆರ್ ಕಿಂಗ್ಸ್ ಇಲೆವೆನ್ ತಂಡ ಗೆಲುವು ಸಾಧಿಸುವ ಮೂಲಕ MPL ಟ್ರೋಫಿಯನ್ನ ತನ್ನ ಮುಡಿಗೇರಿಸಿಕೊಂಡಿತು.ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಫೀನಿಕ್ಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು.ಸುಮಾರು ಮೂರು ತಿಂಗಳಿಂದ ನಡೆಯುತ್ತಿರುವ ಮೈಸೂರು ಪೊಲೀಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿವಿದ ವಿಭಾಗದ 12 ತಂಡಗಳು ಭಾಗವಹಿಸಿದ್ದವು.ಕಾನೂನು ರಕ್ಷಣೆಗೂ ಸೈ…ಬ್ಯಾಟ್ ಬಾಲ್ ಹಿಡಿಯುವುದಕ್ಕೂ ಸೈ ಎಂದು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ತಂಡಗಳು ಪರಸ್ಪರ ಎದುರಿಸಿದ್ದವು.ಸುಮಾರು 136 ಪಂದ್ಯಗಳು ನಡೆಯಿತು.ಅಂತಿಮವಾಗಿ ಸಿಎಆರ್ ನ ಕಿಂಗ್ಸ್ XI ತಂಡ ಹಾಗೂ ಲಕ್ಷ್ಮಿಪುರಂ ಠಾಣೆಯ ಫೀನಿಕ್ಸ್ ತಂಡ ಫೈನಲ್ ತಲುಪಿತ್ತು.ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಮುಂಜಾನೆ 6 ರಿಂದ 9 ಗಂಟೆ ಒಳಗೆ ಪ್ರತಿದಿನ ಮ್ಯಾಚ್ ಗಳು ನಡೆಯಿತು.ಕರ್ತವ್ಯದ ಒತ್ತಡಗಳ ನಡುವೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಿಣಿತ ಕ್ರಿಕಟ್ ಪಟುಗಳು ನಾಚುವಂತೆ ಪಂದ್ಯಾವಳಿಯಲ್ಲಿ ಉತ್ಸಾಹದಿಂದ ಭಾಗವಹಿಸಿ ಕ್ರೀಡಾ ಮನೋಭಾವವನ್ನ ಪ್ರದರ್ಶಿಸಿದ್ದರು.ಇಂದು ನಡೆದ ರೋಚಕ ಫೈನಲ್ ಪಂದ್ಯಾವಳಿಯಲ್ಲಿ ಸಿಎಆರ್ ನ ಕಿಂಗ್ಸ್ ಇಲವೆನ್ ತಂಡ ಲಕ್ಷ್ಮಿಪುರಂ ಠಾಣೆಯ ಫೀನಿಕ್ಸ್ ತಂಡವನ್ನ ಮಣಿಸಿ ಟ್ರೋಫಿಗೆ ಮುತ್ತಿಟ್ಟಿತು.
ವಿಷ್ಣು ರವರನ್ನ ಫೈನಲ್ ಪಂದ್ಯದ ಮ್ಯಾನ್ ಆಫ್ ದ ಮ್ಯಾಚ್ ಆಗಿ ಘೋಷಿಸಲಾಯಿತು.ಬೆಸ್ಟ್ ಬ್ಯಾಟ್ಸ್ ಮನ್ ಆಗಿ ರವೀಶ,ಬೆಸ್ಟ್ ಬೌಲರ್ ಆಗಿ ದುರ್ಗ,ಆಲ್ ರೌಂಡರ್ ಆಗಿ ರಾಜೇಶ್ ಆಯ್ಕೆಯಾದರು.ಫೈನಲ್ ಪಂದ್ಯದಲ್ಲಿ ಶಿವು ರವರು ಹೆಚ್ಚು ಬೌಂಡರಿ ಗಳಿಸುವ ಮೂಲಕ ಗಮನ ಸೆಳೆದರು.
ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಎಮ್.ಮುತ್ತುರಾಜ್,ಸಶಸ್ತ್ರ ಮೀಸಲು ಪಡೆ ಉಪಪೋಲೀಸ್ ಆಯುಕ್ತರಾದ ಮಾರುತಿ ಹಾಗೂ ಕಿರಣ್ ರಾಜ್ ರವರು ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಿ ವಿನ್ನರ್ಸ್ ಹಾಗೂ ರನ್ನರ್ಸ್ ತಂಡಗಳಿಗೆ ಟ್ರೋಫಿಯನ್ನ ವಿತರಿಸಿ ಶುಭಹಾರೈಸಿದರು…
