
ಮಾಜಿ ಬದಲು ನಿಕಟಪೂರ್ವ ಆದ ಯಶಸ್ವಿನಿ ಸೋಮಶೇಖರ್…
- TV10 Kannada Exclusive
- June 2, 2024
- No Comment
- 242

ಮೈಸೂರು,ಜೂ2,Tv10 ಕನ್ನಡ
ಮಾಜಿ ಬದಲು ನಿಕಟಪೂರ್ವ ಅಧ್ಯಕ್ಷ ಆದ ಯಶಸ್ವಿನಿ ಸೋಮಶೇಖರ್…! ತಮ್ಮ ನಿವಾಸದ ಮುಂದೆ ಮುಡಾ ಅಧ್ಯಕ್ಷ ಎಂಬ ನಾಮಫಲಕ ಹಾಕಿದ್ದ ಯಶಸ್ವಿನಿ ಸೋಮಶೇಖರ್ ಇದೀಗ ಮತ್ತೊಂದು ಎಡವಟ್ಟು ಮಾಡಿದ್ದಾರೆ.ಮಾಜಿ ಎಂದು ಬದಲಾವಣೆ ಮಾಡುವ ಬದಲು ನಿಕಟಪೂರ್ವ ಎಂದು ಬದಲಾಯಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.ಮಾಜಿಗೂ ನಿಕಟಪೂರ್ವಕ್ಕೂ ಅರ್ಥ ತಿಳಿಯದೆ ಎಡವಟ್ಟು ಮಾಡಿಕೊಂಡಿದ್ದಾರೆ.ಮುಡಾ ಅಧ್ಯಕ್ಷರಾಗಿ ಅಧಿಕಾರ ತ್ಯಜಿಸಿ ಮೂರು ವರ್ಷ ಕಳೆದರೂ ತಮ್ಮ ನಿವಾಸದ ಮುಂದಿನ ಗೇಟ್ ಮೇಲೆ ಮುಡಾ ಅಧ್ಯಕ್ಷರೆಂದೇ ಫಲಕ ಹಾಕಿ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುತ್ತಿದ್ದರು.ಇವರ ಅವಧಿ ಮುಗಿದ ನಂತರ ಇಬ್ಬರು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರೂ ತಮ್ಮ ನಿವಾಸದ ಮುಂದೆ ಅಳವಡಿಸಿದ್ದ ಫಲಕವನ್ನ ಬದಲಾಯಿಸಿರಲಿಲ್ಲ.ಈ ಬಗ್ಗೆ ಕೆಲವು ದಿನಗಳ ಹಿಂದಷ್ಟೆ ನಮ್ಮ ವಾಹಿನಿಯಲ್ಲಿ ಈ ಬಗ್ಗೆ ಸುದ್ದಿ ಪ್ರಸಾರ ಮಾಡಲಾಗಿತ್ತು.ಇದೀಗ ಎಚ್ಚೆತ್ತ ಯಶಸ್ವಿನಿ ಸೋಮಶೇಖರ್ ತಮ್ಮ ತಪ್ಪನ್ನ ಸರಿಪಡಿಸಿಕೊಳ್ಳುವ ಬದಲು ನಿಕಟಪೂರ್ವ ಮುಡಾ ಅಧ್ಯಕ್ಷರು ಎಂದು ಫಲಕದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಮತ್ತೊಮ್ಮೆ ತಪ್ಪು ಮಾಹಿತಿ ನೀಡುತ್ತಿದ್ದಾರೆ…