ಕೈ ಕಳೆದುಕೊಂಡು 6 ತಿಂಗಳಾದ್ರೂ ಬಾರದ ಪರಿಹಾರ…ಅತಂತ್ರಕ್ಕೆ ಸಿಲುಕಿದ ಕುಟುಂಬ…FIR ದಾಖಲಿಸಿದರೂ ಡೋಂಟ್ ಕೇರ್…
- TV10 Kannada Exclusive
- June 6, 2024
- No Comment
- 141
ನಂಜನಗೂಡು,ಜೂ6,Tv10 ಕನ್ನಡ
ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮಿಷಿನ್ ಗೆ ಕೈಕೊಟ್ಟು ಗಾಯಗೊಂಡ ಕಾರ್ಮಿಕನಿಗೆ 6 ತಿಂಗಳಾದರೂ ಪರಿಹಾರ ಬಂದಿಲ್ಲ.ಕೆಲಸವೂ ಇಲ್ಲದೆ ಪರಿಹಾರವೂ ಇಲ್ಲದೆ ಜೀವನ ನಿರ್ವಹಣೆಗೆ ಪರದಾಡುತ್ತಿರುವ ಕಾರ್ಮಿಕನ ಕುಟುಂಬ ಪರಿಪಾಟಲು ಪಡುತ್ತಿದೆ.ಪರಿಹಾರ ನೀಡುವುದಾಗಿ ಪೊಳ್ಳು ಭರವಸೆ ನೀಡಿ ಕೈಕೊಟ್ಟ ಕಾರ್ಖಾನೆ ಮುಖ್ಯಸ್ಥರ ಮೇಲೆ ಎಫ್.ಐ.ಆರ್.ದಾಖಲಿಸಿದರೂ ನಿರ್ಲಕ್ಷಿಸಿದ್ದಾರೆ.ಕುಟುಂಬ ನಿರ್ವಹಣೆಗೆ ಆರ್ಥಿಕ ಸಮಸ್ಯೆ ಎದರಿಸುತ್ತಿರುವ ಕಾರ್ಮಿಕನ ನೆರವಿಗೆ ಸರ್ಕಾರ ಬರಬೇಕಿದೆ.
ನಂಜನಗೂಡು ತಾಲೂಕಿನ ಹೊಸಕೋಟೆ ಗ್ರಾಮದ ಅಂದಾನಿ ರವರು ಇಂತಹ ಸಂಕಷ್ಟಕ್ಕೆ ಸಿಲುಕದವರು.ಕಳೆದ 11 ವರ್ಷಗಳಿಂದ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ರಾಜ್ ಶೀಲ್ ಪ್ರೈ.ಲಿ.ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.ಪ್ರಾರಂಭದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಅಂದಾನಿ ರವರಿಗೆ ಮಿಷಿನ್ ಆಪರೇಟರ್ ಕೆಲಸಕ್ಕೆ ಬಲವಂತವಾಗಿ ನಿಯೋಜಿಸಿದ್ದಾರೆ.ಯಾವುದೇ ತರಬೇತಿ ನೀಡದೆ ಸುರಕ್ಷಾ ಸಲಕರಣೆಗಳನ್ನ ಒದಗಿಸದೆ ಬಲವಂತವಾಗಿ ಜವಾಬ್ದಾರಿ ನೀಡಲಾಗಿದೆ.27-12-2023 ರಂದು ಕೆಲಸ ಮಾಡುವಾಗ ಆಕಸ್ಮಿಕವಾಗಿ ಮಿಷಿನ್ ಗೆ ಕೈ ಸಿಲುಕಿದ ಪರಿಣಾಮ ಎಡಗೈ ಮೂಳೆ ಮುರಿದಿದೆ.ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಕಾರ್ಖಾನೆ ಮುಖ್ಯಸ್ಥರು ಪರಿಹಾರ ಹಾಗೂ ಉದ್ಯೋಗ ನೀಡುವ ಭರವಸೆ ನೀಡಿದ್ದರು.ಆದರೆ ಘಟನೆ ನಡೆದು 6 ತಿಂಗಳಾದ್ರೂ ಇದುವರೆಗೆ ಪರಿಹಾರ ಬಂದಿಲ್ಲ.ಜೊತೆಗೆ ಭರವಸೆ ಕೊಟ್ಟಂತೆ ಉದ್ಯೋಗವನ್ನೂ ನೀಡಿಲ್ಲ.ಇದೀಗ ಕಾನೂನು ಮೊರೆ ಹೋಗಿರುವ ಅಂದಾನಿ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಕಾರ್ಖಾನೆಯ ಪ್ರಮುಖರಾದ ಜೇಮ್ಸ್ ಮುಲಾಯಲ್,ಟಾಮಿ,ಮನು ಹಾಗೂ ಶ್ರೀನಿವಾಸ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಜೀವನ ನಿರ್ವಹಣೆಗೆ ಸಂಕಷ್ಟ ಎದುರಿಸುತ್ತಿರುವ ಅಂದಾನಿ ಕುಟುಂಬಕ್ಕೆ ಕಾನೂನು ನೆರವು ನೀಡಬೇಕಿದೆ…