ಗುಜರಿ ಗಡಿಯಲ್ಲಿ ಕ್ಲೋರಿನ್ ಸೋರಿಕೆ…5 ಮಂದಿ ಅಸ್ವಸ್ಥ…ಸ್ಥಳಕ್ಕೆ ಜಿಲ್ಲಾಧಿಕಾರಿ,ತಹಸೀಲ್ದಾರ್ ಭೇಟಿ…
- MysoreTV10 Kannada Exclusive
- June 8, 2024
- No Comment
- 96
ಮೈಸೂರು,ಜೂ8,Tv10 ಕನ್ನಡ
ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳೆ ಕೆಸರೆಯ ರಿದಾ ಸ್ಟೀಲ್ ಟ್ರೇಡರ್ಸ್ ನಲ್ಲಿ ಕ್ಲೋರಿನ್ ಸೋರಿಕೆಯಾಗಿ 5 ಮಂದಿ ಅಸ್ವಸ್ಥರಾಗಿದ್ದಾರೆ. ವರುಣಾ ಚಾನಲ್ ಹಳೆ ಕೆಸರೆಯಲ್ಲಿರುವ ಮಹಮದ್ ಎಂಬುವವರ ಗುಜರಿ ಅಂಗಡಿಯಲ್ಲಿ ಘಟನೆ ನಡೆದಿದೆ. ಮೂರು ತಿಂಗಳ ಹಿಂದೆ ದಾವಣಗೆರೆ ಯಿಂದ ಗುಜರಿ ಪದಾರ್ಥಗಳನ್ನ ಖರೀದಿಸಿರುತ್ತಾರೆ. ಇದರಲ್ಲಿ ಕ್ಲೋರಿನ್ ಸಿಲಿಂಡರ್ ಗಳು ಸಹ ಇದ್ದವು.ಒಂದರಲ್ಲಿ ಗ್ಯಾಸ್ ಇದ್ದು ಇದನ್ನು ತುಂಡು ಮಾಡುವಾಗ ಒಳಗಿದ್ದ ಕ್ಲೋರನ್ ಹೊರ ಬಂದಿರುತ್ತದೆ. ಈ ಸಮಯದಲ್ಲಿ ಸಮೀಪದ ಮನೆಗಳಲ್ಲಿ ವಾಸ ಮಾಡುತ್ತಿದ್ದ ಕುಟುಂಬದ ಸುಮಾರು 5 ಮಂದಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ರಿಂಗ್ ರಸ್ತೆಯಲ್ಲಿರುವ ಪ್ರಜ್ವಲ್ ಆಸ್ಪತ್ರೆ ಯಲ್ಲಿ ಅಸ್ವಸ್ಥರನ್ನ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆ ನಡೆದ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ,ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಡಿಸಿಪಿ ಮುತ್ತುರಾಜ್ ಹಾಗೂ ಜಾಹ್ನವಿ,ತಹಸೀಲ್ದಾರ್ ಮಹೇಶ್ ಕುಮಾರ್,ವಿ.ಎ.ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಎನ್.ಆರ್.ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಅಸ್ವಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ…