
ದೇವಸ್ಥಾನ ಬೀಗ ಮುರಿದು ಕಳ್ಳತನ…ಹುಂಡಿಯಲ್ಲಿದ್ದ 1 ಲಕ್ಷ ನಗದು ದೋಚಿ ಪರಾರಿ…
- TV10 Kannada Exclusive
- June 12, 2024
- No Comment
- 228


ಹುಣಸೂರು,ಜೂ12,Tv10 ಕನ್ನಡ

ದೇವಾಲಯದ ಬೀಗ ಮುರಿದು ಹುಂಡಿಹಣ ದೋಚಿ ಪರಾರಿಯಾದ ಘಟನೆ ಹುಣಸೂರು ತಾಲೂಕಿನ ಸಿರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಭೈರವೇಶ್ವರ ದೇವಾಲಯದ ಬೀಗ ಮುರಿದು ಪ್ರವೇಶಿಸಿದ ಕಳ್ಳರು ಹುಂಡಿಯನ್ನ ಒಡೆದು ಚಿಲ್ಲರೆ ಹಣ ಬಿಟ್ಟು ನೋಟುಗಳನ್ನ ಮಾತ್ರ ದೋಚಿ ಪರಾರಿಯಾಗಿದ್ದಾರೆ.ಹುಂಡಿಯಲ್ಲಿ ಸುಮಾರು ಒಂದು ಲಕ್ಷ ಸಂಗ್ರಹವಾಗಿತ್ತೆಂದು ದೇವಾಲಯದ ಮುಖ್ಯಸ್ಥರು ದೂರಿನಲ್ಲಿ ತಿಳಿಸಿದ್ದಾರೆ.ಸ್ಥಳಕ್ಕೆ ಬೆರಳುಮುದ್ರೆ ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…