ಸಿಕ್ರೇಟ್ ಪ್ಲೇಸ್ ನಲ್ಲಿದ್ದ ಕೀ ಬಳಸಿ ನಗದು ಚಿನ್ನಾಭರಣ ದೋಚಿದ ಖದೀಮರು…40 ಗ್ರಾಂ ಚಿನ್ನ 80 ಸಾವಿರ ನಗದು ಕಳುವು…

ಸಿಕ್ರೇಟ್ ಪ್ಲೇಸ್ ನಲ್ಲಿದ್ದ ಕೀ ಬಳಸಿ ನಗದು ಚಿನ್ನಾಭರಣ ದೋಚಿದ ಖದೀಮರು…40 ಗ್ರಾಂ ಚಿನ್ನ 80 ಸಾವಿರ ನಗದು ಕಳುವು…

ಟಿ.ನರಸೀಪುರ,ಜೂ12,Tv10 ಕನ್ನಡ

ಸಿಕ್ರೆಟ್ ಪ್ಲೇಸ್ ನಲ್ಲಿ ಇರಿಸಿದ್ದ ಕೀ ಬಳಸಿ 1.80 ಲಕ್ಷ ಮೌಲ್ಯದ 40 ಗ್ರಾಂ ಚಿನ್ನಾಭರಣ ಹಾಗೂ 80 ಸಾವಿರ ನಗದು ದೋಚಿ ಪರಾರಿಯಾದ ಘಟನೆ ಟಿ.ನರಸೀಪುರ ತಾಲೂಕು ತುಂಬಲ ಗ್ರಾಮದ ಬೆಳ್ಳಬೆಳಕು ಬಡಾವಣೆಯಲ್ಲಿ ನಡೆದಿದೆ.ಸುಮ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ.ಗೋಲಕದಲ್ಲಿ ಇಡಲಾಗಿದ್ದ 80 ಸಾವಿರ ನಗದು ಹಾಗೂ ಬೀರುವಿನಲ್ಲಿದ್ದ 40 ಗ್ರಾಂ ಚಿನ್ನಾಭರಣ ದೋಚಿದ ಖದೀಮರು ಪರಾರಿಯಾಗಿದ್ದಾರೆ.

ಮನೆಯಿಂದ ಹೊರಗಡೆ ತೆರಳುವ ವೇಳೆ ಪತಿ ಅಥವಾ ಮಗನ ಅನುಕೂಲಕ್ಕಾಗಿ ಕೀಗಳನ್ನ ಸೀಕ್ರೆಟ್ ಜಾಗದಲ್ಲಿ ಸುಮ ಇರಿಸಿ ಹೋಗುತ್ತಿದ್ದರು.ಇದನ್ನ ಸೂಕ್ಷ್ಮವಾಗಿ ಗಮನಿಸಿಕೊಂಡಿದ್ದ ಖದೀಮರು ಸುಮ ಹಾಗೂ ಪತಿ ಮನೆಯಿಂದ ಹೊರಗಡೆ ತೆರಳಿದ ಸಂಧರ್ಭವನ್ನ ಬಳಸಿ ಸೀಕ್ರೆಟ್ ಪ್ಲೇಸ್ ನಲ್ಲಿದ್ದ ಕೀ ಬಳಸಿ ಕೃತ್ಯವೆಸಗಿದ್ದಾರೆ.ಮಾಜಿ ಶಾಸಕ ಅಶ್ವಿನ್ ಕುಮಾರ್ ರವರ ತೋಟದ ಮನೆಯ ಮುಂಭಾಗದಲ್ಲೇ ಕೃತ್ಯ ನಡೆದಿದೆ.ತೋಟದ ಮನೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು ಕಳ್ಳರ ಕೈಚಳಕ ಸೆರೆಯಾಗಿರುವ ಸಾಧ್ಯತೆ ಇದೆ ಎಂದು ಸುಮ ರವರು ಪೊಲೀಸರಿಗೆ ತಿಳಿಸಿದ್ದಾರೆ.ಸಿಸಿ ಕ್ಯಾಮರಾ ದೃಶ್ಯಗಳನ್ನ ಸಂಗ್ರಹಿಸಿರುವ ಟಿ.ನರಸೀಪುರ ಪೊಲೀಸರು ಖದೀಮರ ಸೆರೆಗೆ ಜಾಲ ಬೀಸಿದ್ದಾರೆ…

Spread the love

Related post

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…
ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ… ಮಂಡ್ಯ,ಆ7,Tv10 ಕನ್ನಡ ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಕೊಲೆಯಾಗಿದೆ.ಕೆ ಆರ್ ಎಸ್ ನಲ್ಲಿ ಮಲಗಿದ್ದ ವ್ಯಕ್ತಿ ತಲೆ…

Leave a Reply

Your email address will not be published. Required fields are marked *