ಪಾಲಿಕೆ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲು…ನಕಲಿ ದಾಖಲೆ ಸೃಷ್ಟಿಸಿ ಖಾತೆ…ವಲಯ 7 ರ ಅಧಿಕಾರಿಗಳೇ ಶಾಮೀಲು…ದಾಖಲೆ ಬಿಡುಗಡೆ ಮಾಡಿದ RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ…

ಪಾಲಿಕೆ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲು…ನಕಲಿ ದಾಖಲೆ ಸೃಷ್ಟಿಸಿ ಖಾತೆ…ವಲಯ 7 ರ ಅಧಿಕಾರಿಗಳೇ ಶಾಮೀಲು…ದಾಖಲೆ ಬಿಡುಗಡೆ ಮಾಡಿದ RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ…

  • Mysore
  • July 3, 2024
  • No Comment
  • 1224

ಮೈಸೂರು,ಜು3,Tv10 ಕನ್ನಡ

ಮೈಸೂರು ಮಹಾನಗರ ಪಾಲಿಕೆಗೆ ಸೇರಿದ ಕೋಟ್ಯಾಂತರ ರೂ ಬೆಲೆ ಬಾಳುವ ಆಸ್ತಿಗೆ ನಕಲಿ ದಾಖಲೆಗಳನ್ನ ಸೃಷ್ಟಿಸಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಖಾತೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.ದಾಖಲೆಗಳನ್ನ ಮಾಹಿತಿ ಹಕ್ಕಿನ ಮುಖಾಂತರ ಪಡೆದ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಬಿಡುಗಡೆ ಮಾಡಿದ್ದಾರೆ.ಅಕ್ರಮವಾಗಿ ಖಾತೆ ಮಾಡಿಕೊಡುವಲ್ಲಿ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ.

ಮಲಿನ‌ನೀರು ಶುದ್ದೀಕರಣ ಘಟಕ ಸ್ಥಾಪಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆಯು ಕೆಸರೆ ಭಾಗದ ಸ ನಂ.501/1 ರಿಂದ 501/8 ರವರೆಗೆ ಹಲವು ಜಮೀನುಗಳನ್ನ 1997-98 ನೇ ಸಾಲಿನಲ್ಲಿ LAQ CR no.230/96-97 ರ ಅನ್ವಯದಂತೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ.ಸದರಿ ಜಮೀನುಗಳ ಮಾಲೀಕರಿಗೆ ಪರಿಹಾರವನ್ನೂ ಸಹ ನೀಡಲಾಗಿದೆ.

ಸ್ವಾಧೀನ ಪಡಿಸಿಕೊಳ್ಳಲಾದ ಜಮೀನಿನ ಪೈಕಿ ಸರ್ವೆ ನಂ.501/7 ರಲ್ಲಿ ಪೋಡಿ ಜಮೀನು ಸೇರಿದಂತೆ ಸುಮಾರು ಒಂದು ಎಕ್ರೆಗೂ ಹೆಚ್ಚು ಪ್ರದೇಶದ ಜಮೀನನ್ನ ಖಾಸಗಿ ವ್ಯಕ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ.ಸರ್ವೆ ನಂ.501/7 ಕ್ಕೆ 501/7b ಎಂದು ನಕಲಿ ದಾಖಲೆಗಳನ್ನ ಸೃಷ್ಟಿಸಲಾಗಿದೆ.ಇಲ್ಲದಿರುವ ಸರ್ವೆ ನಂ ಸೃಷ್ಟಿಸಿದ ವಲಯ ಕಚೇರಿ 7 ಅಧಿಕಾರಿಗಳು ಭೂಗಳ್ಳರ ಜೊತೆ ಶಾಮೀಲಾಗಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.ವಲಯ ಕಚೇರಿ 7 ರ RI,ARO,RO,asst.commissioner ರವರುಗಳೇ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.


ತಮ್ಮ ಅಕ್ರಮವನ್ನ ಮುಚ್ಚಿಹಾಕುವ ಉದ್ದೇಶದಿಂದ ಸರ್ವೆ ನಂ 504/3 ರ ಜಮೀನಿನಲ್ಲಿ ಬೆಳೆದಿರುವ ತೆಂಗಿನ ಮರಗಳನ್ನ ಖಾಸಗಿ ವ್ಯಕ್ತಿಗಳು ಕಟಾವ್ ಮಾಡಿದ್ದಾರೆಂದು ಆರೋಪಿಸಿ ಎನ್.ಆರ್.ಪೊಲೀಸ್ ಠಾಣೆಯಲ್ಲಿ FIR ಮಾಡಿಸುವ ಮೂಲಕ ದಾರಿ ತಪ್ಪಿಸುವ ಕೆಲಸ ಅಧಿಕಾರಿಗಳು ಮಾಡಿದ್ದಾರೆ.ಈ ಅಕ್ರಮವನ್ನ RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆಗಳನ್ನ ಪಡೆದಿದ್ದಾರೆ.

ಒಂದೆಡೆ ಮುಡಾ ಅಕ್ರಮಗಳು ಬೆಳಕಿಗೆ ಬಂದು ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದ್ದರೆ ಮತ್ತೊಂದೆಡೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಭೂಗಳ್ಳರ ಜೊತೆ ಕೈ ಜೋಡಿಸಿ ಅಕ್ರಮಗಳಿಗೆ ಸಾಥ್ ನೀಡುತ್ತಿದ್ದಾರೆ.ಸಧ್ಯ ಕೂಡಲೇ ನಡೆದಿರುವ ಅಕ್ರಮ ಖಾತೆ 501/7b ರದ್ದು ಪಡಿಸಬೇಕು,ಹಾಗೂ ಅಕ್ರಮಕ್ಕೆ ಸಾಥ್ ನೀಡಿದ ವಲಯ 7 ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕಿದೆ…

Spread the love

Related post

ಆರೋಗ್ಯ ಮತ್ತು ಶಿಕ್ಷಣ ಮಕ್ಕಳ ಭವಿಷ್ಯದ ಎರಡು ಚಕ್ರಗಳು- ಸಿ.ಆರ್ ದಿನೇಶ್

ಆರೋಗ್ಯ ಮತ್ತು ಶಿಕ್ಷಣ ಮಕ್ಕಳ ಭವಿಷ್ಯದ ಎರಡು ಚಕ್ರಗಳು- ಸಿ.ಆರ್ ದಿನೇಶ್

ಆರೋಗ್ಯ ಮತ್ತು ಶಿಕ್ಷಣ ಮಕ್ಕಳ ಭವಿಷ್ಯದ ಎರಡು ಚಕ್ರಗಳು- ಸಿ.ಆರ್ ದಿನೇಶ್ “ಆರೋಗ್ಯ ಮತ್ತು ಶಿಕ್ಷಣವ ಮಕ್ಕಳ ಭವಿಷ್ಯದ ಎರಡು ಚಕ್ರಗಳು. ಪೌಷ್ಟಿಕ ಆಹಾರ ಹಾಗೂ ಗುಣಮಟ್ಟದ ಶಿಕ್ಷಣ…
ಮೈಸೂರಿನಲ್ಲಿ ಮೈ ಕೊರೆವ ಚಳಿ…ಹೊದಿಕೆ ವಿತರಿಸಿ ಸಾಮಾಜಿಕ ಕಳಕಳಿ…

ಮೈಸೂರಿನಲ್ಲಿ ಮೈ ಕೊರೆವ ಚಳಿ…ಹೊದಿಕೆ ವಿತರಿಸಿ ಸಾಮಾಜಿಕ ಕಳಕಳಿ…

ಮೈಸೂರಿನಲ್ಲಿ ಮೈ ಕೊರೆವ ಚಳಿ…ಹೊದಿಕೆ ವಿತರಿಸಿ ಸಾಮಾಜಿಕ ಕಳಕಳಿ… ಮೈಸೂರು,ಡಿ2,Tv10 ಕನ್ನಡ ಮೈಸೂರಿನಲ್ಲಿ ಮೈ ಕೊರೆಚ ಚಳಿ ಶುರುವಾಗಿದೆ.ರಸ್ತೆ ಬದಿ ಮಲಗುವ ನಿರಾಶ್ರಿತರು ಹೊದಿಕೆ ಇಲ್ಲದೆ ಪರದಾಡುತ್ತಿದ್ದಾರೆ.ನಿರಾಶ್ರಿತರಿಗೆ ಹೊದಿಕೆ…
ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್ಪಿರಿಯಾಪಟ್ಟಣ ಕಂದಾಯ ಇಲಾಖೆ ಸರ್ವೇಯರ್ ರವೀಂದ್ರ ಲೋಕಾಯುಕ್ತ ಬಲೆಗೆ

ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್ಪಿರಿಯಾಪಟ್ಟಣ ಕಂದಾಯ ಇಲಾಖೆ ಸರ್ವೇಯರ್ ರವೀಂದ್ರ ಲೋಕಾಯುಕ್ತ…

ಮೈಸೂರು ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್ಪಿರಿಯಾಪಟ್ಟಣ ಕಂದಾಯ ಇಲಾಖೆ ಸರ್ವೇಯರ್ ರವೀಂದ್ರ ಲೋಕಾಯುಕ್ತ ಬಲೆಗೆಪೋಡಿ ದುರಸ್ತಿ ಸಾಗುವಳಿ ಹೆಸರಿನಲ್ಲಿ ಲಂಚಜಮೀನು ರಸ್ತೆಗೆ ಹೋಗುತ್ತೇ ಅಂತಾ ಹೆದರಿಸಿ ಲಂಚಕ್ಕೆ‌ ಬೇಡಿಕೆ1…

Leave a Reply

Your email address will not be published. Required fields are marked *