ಸಿಎ ನಿವೇಶನದಲ್ಲಿ ಅನಧಿಕೃತ ಶಾಲಾ ಕಟ್ಟಡ ನಿರ್ಮಾಣ…ಮೈಸೂರು ಅಭಿವೃಧ್ದಿ ಪ್ರಾಧಿಕಾರದಿಂದ ತೆರುವು…ಲಕ್ಷಾಂತರ ಮೌಲ್ಯದ ಸಿಎ ನಿವೇಶನ ವಶಕ್ಕೆ…

ಸಿಎ ನಿವೇಶನದಲ್ಲಿ ಅನಧಿಕೃತ ಶಾಲಾ ಕಟ್ಟಡ ನಿರ್ಮಾಣ…ಮೈಸೂರು ಅಭಿವೃಧ್ದಿ ಪ್ರಾಧಿಕಾರದಿಂದ ತೆರುವು…ಲಕ್ಷಾಂತರ ಮೌಲ್ಯದ ಸಿಎ ನಿವೇಶನ ವಶಕ್ಕೆ…

ಸಿಎ ನಿವೇಶನದಲ್ಲಿ ಅನಧಿಕೃತ ಶಾಲಾ ಕಟ್ಟಡ ನಿರ್ಮಾಣ…ಮೈಸೂರು ಅಭಿವೃಧ್ದಿ ಪ್ರಾಧಿಕಾರದಿಂದ ತೆರುವು…ಲಕ್ಷಾಂತರ ಮೌಲ್ಯದ ಸಿಎ ನಿವೇಶನ ವಶಕ್ಕೆ…

ಮೈಸೂರು,ಜ28,Tv10 ಕನ್ನಡ

ಸಿಎ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಶಾಲಾ ಕಟ್ಟಡವನ್ನ ಮೈಸೂರು ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಿದ್ದಾರೆ.ಜೆಸಿಬಿ ಯಂತ್ರದ ಮೂಲಕ ಅನಧಿಕೃತ ಕಟ್ಟಡವನ್ನ ನೆಲಸಮಗೊಳಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ.ಮೈಸೂರು ತಾಲೂಕು ವರುಣಾ ಹೋಬಳಿ ವಾಜಮಂಗಲ ಗ್ರಾಮದ ಸರ್ವೆ ನಂ.30 ರ 0-06 ಗುಂಟೆ,0/2 ರ 0-31 ಗುಂಟೆ ಮತ್ತು 30/6 ರ 0-37 ಗುಂಟೆ ಒಟ್ಟು 1 ಎಕ್ರೆ 34 ಗುಂಟೆ ಜಮೀನು ಮೈಸೂರು ಅಭಿವೃದ್ದಿ ಪ್ರಾಧಿಕಾರದ ಸೊತ್ತು.ಇದರಲ್ಲಿ 378.18 ಚದರ ಮೀಟರ್ ವಿಸ್ತೀರ್ಣದ ಜಾಗವನ್ನ ಸಿಎ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ.ಸದರಿ ಸಿಎ ನಿವೇಶನದಲ್ಲಿ ರಾಘವೇಂದ್ರ ಪಿಸಿ ಎಜುಕೇಷನ್ ಹಾಗೂ ಚಾರಿಟೇಬಲ್ ಟ್ರಸ್ಟ್ ನವರು ಅನಧಿಕೃತವಾಗಿ ಶಾಲಾ ಕಟ್ಟಡ ನಿರ್ಮಿಸುತ್ತಿದ್ದರು.ಈ ಮಾಹಿತಿ ಅರಿತ ಪ್ರಾಧಿಕಾರದ ಆಯುಕ್ತ ಟಿ.ಎಸ್.ರಕ್ಷಿತ್ ರಕ್ಷಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.ಇಂದು ಉದಯಗಿರಿ ಠಾಣಾ ಪೊಲೀಸರ ನೆರವಿನಿಂದ ಅನಧಿಕೃತ ಕಟ್ಟಡವನ್ನ ನೆಲಸಮಗೊಳಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ.ಸದರಿ ನಿವೇಶನದ ಮೌಲ್ಯ ಸುಮಾರು 80 ರಿಂದ 90 ಲಕ್ಷ ಎನ್ನಲಾಗಿದೆ.ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ ಕುಮಾರ್,ಕಿರಿಯ ಅಭಿಯಂತರ ಜಿ.ರಾಜಶೇಖರ್,ಭೂಮಾಪಕರಾದ ರಘು ರವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಪ್ರಾಧಿಕಾರದ ಆಸ್ತಿ ಸಂರಕ್ಷಣೆಗಾಗಿ 13-10-2025 ರಂದು ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗಿದೆ.ಕಾರ್ಯಪಾಲಕ ಅಭಿಯಂತರ ಮಹೇಶ್ ಹಾಗೂ ನಾಗೇಶ್ ,ಅಧಿಕಾರಿಗಳಾದ ರಾಜಶೇಖರ್,ಭರತ್ ಕುಮಾರ್,ರಘು,ಸಚಿನ್,ರವಿಪ್ರಸಾದ್,ಗಂಗಾಧರ್,ಮಹದೇವಸ್ವಾಮಿ,ಶೃತಿ,ಕೆಂಪಣ್ಣ,ಉಮೇಶ್ ರವರನ್ನೊಳಗೊಂಡಿದೆ….

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *