ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಆಸ್ತಿ ಮುಟ್ಟುಗೋಲು…ಬಣ್ಣ ಬಯಲು ಮಾಡಿದ ಇಡಿ…
- TV10 Kannada Exclusive
- January 22, 2026
- No Comment
- 5

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಆಸ್ತಿ ಮುಟ್ಟುಗೋಲು…ಬಣ್ಣ ಬಯಲು ಮಾಡಿದ ಇಡಿ…
ಬೆಂಗಳೂರು,ಜ22,Tv10 ಕನ್ನಡ

ಮುಡಾ ಮಾಜಿ ಆಯುಕ್ತ GT ದಿನೇಶ್ ಕುಮಾರ್ ಹಾಗೂ ಮಾಜಿ ಅಧ್ಯಕ್ಷ SK ಮರಿಗೌಡನ ಅಕ್ರಮಗಳನ್ನ ಬಣ್ಣವನ್ನ ಇಡಿ ಬಯಲು ಮಾಡಿದೆ.ಹಗರಣ ಬೆಳಕಿಗೆ ಬಂದಾಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಮರೀಗೌಡ ರಿಗೆ ಸೇರಿದ 6 ಅಕ್ರಮ ಮುಡಾ ನಿವೇಶಗಳು,
3 ಸ್ಥಿರ ಆಸ್ತಿ, ಒಂದು ವಾಣಿಜ್ಯ ಕಟ್ಟಡ ಮುಟ್ಟುಗೋಲು ಹಾಕಿಕೊಂಡಿದೆ.
ಬರೋಬ್ಬರಿ 20.85 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಮಾಡಿಕೊಂಡಿದೆ.
ED ದಾಳಿ ವೇಳೆ ಬೆಳಕಿಗೆ ಬಂದಿರುವ ಮುಡಾ ಅಕ್ರಮ.ಆ ಅವಧಿಯಲ್ಕಿ ಅಧ್ಯಕ್ಷರಾಗಿದ್ದ
ಮರೀಗೌಡರಿಗೆ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಸಹಾಯ ಮಾಡಿ ಹಗರಣದಲ್ಲಿ ಸಿಲುಕಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.ಇದುವರೆಗೆ ಒಟ್ಟು 460 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲಾಗಿರುವುದನ್ನ ಇಲ್ಲಿ ಗಮನಿಸಬಹುದು…