- Mysore
- July 3, 2024
- No Comment
- 47
ಕೆ.ಆರ್.ಸಾಗರ ಅಣೆಕಟ್ಟೆಯ ಸಮೀಪ ಬಲುಮರಿ ಪ್ರವಾಸಿ ತಾಣದಲ್ಲಿರುವ ಎಡಮುರಿ ಪ್ರವಾಸಿ ತಾಣದಲ್ಲಿನ ಕಾವೇರಿ ನದಿಯಲ್ಲಿ ಪವರ್ ಪ್ಲಾಂಟ್ ನಿರ್ಮಿಸಲು ಹೊರಟ್ಟಿರುವ ವ್ಯಕ್ತಿಯೊಬ್ಬರು ಯಾವುದೇ ಗಡಿ ಗುರುತು ಮಾಡದೆ ಅಕ್ರಮವಾಗಿ ನದಿ ಮತ್ತು ರಸ್ತೆ ತಡೆಗೋಡೆ ನಿರ್ಮಿಸುತ್ತಿದ್ದಾರೆಂದು ಆಕ್ರೋಷ ವ್ಯಕ್ತಿ ಪಡಿಸಿದ ಕ್ರಮ ತೆಗೆದುಕೊಳ್ಳಲು ನಿರ್ಲಕ್ಷ ತೋರುತ್ತಿರುವ ತಹಶೀಲ್ದಾರ್ ಮತ್ತು ಕಾ.ನೀ.ನಿಗಮದ ವಿರುದ್ಧ ಗ್ರಾಮಸ್ಥರು ಸ್ಥಳದಲ್ಲಿ ಘೋಷಣೆ ಕೂಗಿದರು.
ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿ ಕಾ.ನೀ.ನಿಗಮದ ಸಹಾಯಕ ಅಭಿಯಂತರ ಸುರೇಶ್ ಕುಮಾರ್ ತರಾಟೆ ತೆಗೆದುಕೊಂಡ ಗ್ರಾಮಸ್ಥರು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ತಡೆಗೋಡೆ ನಿರ್ಮಿಸುತ್ತಿದ್ದರೂ ಕೂಡ ಸುಮ್ಮನಿದ್ದಿರಿ, ಯಾರ ಪ್ರಭಾವಕ್ಕೆ ಒಳಾಗಾಗಿದ್ದರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಅಭಿಯಂತರ ಅವೈಜ್ಙಾನಿಕ ಕಾಮಗಾರಿ ಬಗ್ಗೆ ನೀವು ನೀಡಿದ ಮನವಿಯನ್ನು ಹಾಗೂ ನಾನು ಪರಿಶೀಲನೆ ನಡೆಸಿದ ವರದಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.
ಮಜ್ಜಿಗೆಪುರ, ಬೆಳಗೊಳ, ಕೆ.ಆರ್.ಸಾಗರ, ಹೊಂಗಳ್ಳಿ ಗ್ರಾಮಗಳ ಹಲವಾರು ಗ್ರಾಮಸ್ಥರು ಎಡಮುರಿ ಪ್ರಸಿದ್ದ ಪ್ರವಾಸಿ ತಾಣವಾಗಿದ್ದು, ಇಲ್ಲಿ ನೂರಾರು ವರ್ಷಗಳ ಇತಿಹಾಸವಿದ್ದು ಅನೇಕ ಜಾತಿ ಪ್ರಾಣಿ-ಪಕ್ಷಿಗಳ ಸಂತತಿ ಇದ್ದು, ಏಕೋ ಜೋನ್ ಎಂದು ಘೋಷಣೆಯಾಗಿದ್ದು, ಇದೇ ಸ್ಥಳದಲ್ಲಿ ಸುತ್ತಮುತ್ತ ಗ್ರಾಮದವರು ತಮ್ಮ ಊರ ಹಬ್ಬಕ್ಕೆ ಇದೇ ಜಾಗದಲ್ಲಿ ಪೂಜೆ ಸಲ್ಲಿಸುತ್ತಾರೆ ಹಾಗೂ ನೀರನ್ನು ತೆಗೆದುಕೊಂಡು ಹೋಗುತ್ತಾರೆ, ಈ ಪ್ರದೇಶದ ಸುತ್ತಮುತ್ತಲಿನ ಜಮೀನು ಕೆಲಸ ಕ್ಕೆ ಬರುವ ಜನರು ತಮ್ಮ ಜಾನುವಾರುಗಳಿಗೆ ನೀರು ಕುಡಿಸಲು ಈ ಸ್ಥಳಕ್ಕೆ ಬರುತ್ತಾರೆ, ಈ ಪ್ರಭಾವ ಬೀರಿದ ವ್ಯಕ್ತಿ ಏಕಾ ಏಕಿ ತಡೆಗೋಡೆ ನೀರ್ಮಾಣ ಮಾಡುತ್ತಿದ್ದು ಸರಿಯಲ್ಲ, ಹಲವು ವರ್ಷಗಳ ಹಿಂದೆ ಅನುಮತಿ ಪಡೆದು ಸ್ಥಳ ನಿಗದಿ ಪಡಿಸದೆ ಅವೈಜ್ಙಾನಿಕವಾಗಿ ನದಿಯಲ್ಲಿ ಕೆಲಸ ಮಾಡುತ್ತಿರುವುದ ಸರಿಯಲ್ಲ ಸಂಬAಧಪಟ್ಟ ಅಧಿಕಾರಿಗ ಇದನ್ನು ತೆರವುಗೊಳಿಸಬೇಕು, ಹಾಗೂ ಪವರ್ ಪ್ಲಾಂಟ್ ಸ್ಥಳಾಂತರ ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಯುತ್ತದೆ ಎಂದು ಬೆಳಗೊಳ ಗ್ರಾ.ಪಂ ಅಧ್ಯಕ್ಷ ಬಿ.ವಿ.ಸುರೇಶ್ ಈ ಸಂದರ್ಭದಲ್ಲಿ ಪತ್ರಿಕೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗೊಳ ತಾ.ಪಂ ಮಾಜಿ ಸದಸ್ಯ ಬಿ.ಟಿ.ಸ್ವಾಮಿಗೌಡ, ಬೆಳಗೊಳ ಗ್ರಾ.ಪಂ ಸದಸ್ಯ ಪುಟ್ಟರಾಜು, ಗ್ರಾ.ಪಂ ಮಾಜಿ ಸದಸ್ಯ ಮಂಜನಾಥ್, ಭಾರ್ಗವ, ಪುಟ್ಟೇಗೌಡ, ರಾಮೇಗೌಡ, ಶಿವೇಗೌಡ, ಎಂ.ಬಿ.ಚAದ್ರು, ಎಂ.ಸಿ.ಚAದ್ರ, ಶ್ರೀನಿವಾಸ್, ಕೆ.ಆರ್.ಎಸ್ ಗ್ರಾ.ಪಂ ಸದಸ್ಯ ರವಿಕುಮಾರ್, ಹೊಸ ಉಂಡವಾಡಿ ಸಂಜು ಸೇರಿದಂತೆ ಮಜ್ಜಿಗೆಪುರ, ಬೆಳಗೊಳ, ಕೆ.ಆರ್.ಸಾಗರ, ಹೊಂಗಳ್ಳಿ ಗ್ರಾಮಗಳ ಗ್ರಾಮಸ್ಥರು ಇದ್ದರು.