ನೂತನ ಜಿಲ್ಲಾಧಿಕಾರಿಗಳ ಮೊದಲ ಜನಸ್ಪಂದನ ಸಭೆ…ಹರಿದು ಬಂದ ಸಮಸ್ಯೆಗಳ ಮಹಾಪೂರ…ಲೋಪದೋಷಗಳನ್ನ ಸರಿಪಡಿಸುವುದಾಗಿ ಲಕ್ಷ್ಮೀಕಾಂತ ರೆಡ್ಡಿ ಭರವಸೆ…

ನೂತನ ಜಿಲ್ಲಾಧಿಕಾರಿಗಳ ಮೊದಲ ಜನಸ್ಪಂದನ ಸಭೆ…ಹರಿದು ಬಂದ ಸಮಸ್ಯೆಗಳ ಮಹಾಪೂರ…ಲೋಪದೋಷಗಳನ್ನ ಸರಿಪಡಿಸುವುದಾಗಿ ಲಕ್ಷ್ಮೀಕಾಂತ ರೆಡ್ಡಿ ಭರವಸೆ…

ನಂಜನಗೂಡು,ಜು5,Tv10 ಕನ್ನಡಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಲಕ್ಷ್ಮೀಕಾಂತ ರೆಡ್ಡಿರವರು ಜನರ ಸಮಸ್ಯೆಗಳ ಬಗ್ಗೆ ಒತ್ತು ನೀಡುವ ಮೂಲಕ ಗಮನ ಸೆಳೆದಿದ್ದಾರೆ.ದಕ್ಷಿಣ ಕಾಶಿ ನಂಜನಗೂಡಿನ ಡಾ. ಬಿಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಡಳಿತ ಯಂತ್ರದಲ್ಲಿ ಲೋಪದೋಷಗಳನ್ನ ಕಂಡು ಬಂದರೆ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ನಂಜನಗೂಡಿನ ತಹಸಿಲ್ದಾರ್ ಶಿವಕುಮಾರ್ ಕಾಸ್ನೋರು ನೇತೃತ್ವದಲ್ಲಿ
ಜನಸ್ಪಂದನ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ ಸಾಕಷ್ಟು ವರ್ಷಗಳಿಂದ ಬಗೆಹರಿಸಲಾಗದ ಕಂದಾಯ,ಅಬಕಾರಿ, ನಗರ ಸಭೆ,ಪೊಲೀಸ್ ,ಪಂಚಾಯತ್ ರಾಜ್, ಶಿಕ್ಷಣ ಇಲಾಖೆ ಅಧಿಕಾರಿಗಳ ಸಮಸ್ಯೆಗಳ ಮಹಾಪೂರವೇ ಸಭೆಯಲ್ಲಿ ಹರಿದುಬಂತು.
ನಂಜನಗೂಡು ಪಟ್ಟಣದ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನ ಸುಲಿಗೆ ಕ್ರಿಮಿನಲ್ ಪ್ರಕರಣಗಳಿಗೆ ಕಡಿಮಣವಿಲ್ಲದಂತಾಗಿದೆ.
ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಮುಂಭಾಗದಲ್ಲಿ ಕಳೆದ ನಾಲ್ಕೈದು ತಿಂಗಳಿಗಳಿಂದ ಭೂಮಿ ಕೊಟ್ಟು ಮೋಸ ಹೋಗಿರುವ ರೈತ ಮಕ್ಕಳು ಮತ್ತು ಸಂಘಟಕರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪ್ರಸ್ತಾಪವಾಯಿತು.
ನಂಜನಗೂಡು ತಾಲೂಕಿನ ಕಾಳಿಗುಂಡಿ ಗ್ರಾಮದ ಮಹದೇವಸ್ವಾಮಿ ಎಂಬ ರೈತ ಕಂದಾಯ ಇಲಾಖೆಯ ಸಮಸ್ಯೆ ಪರಿಹರಿಸಿಕೊಡಲು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದಯಾ ಮರಣ ಕೋರಿ ಅರ್ಜಿಯನ್ನು ನೀಡಿದರು. ತಗಡೂರು ಗ್ರಾಮ ಪಂಚಾಯಿತಿಯಲ್ಲಿ 2019 ನೇ ಸಾಲಿನಿಂದ ಬರೋಬರಿ ಒಂದು ಕೋಟಿಗೂ ಅಧಿಕ ಹಣ ನುಂಗಿ ಭ್ರಷ್ಟಾಚಾರ ನಡೆದಿದೆ. ನಂಜನಗೂಡು ಮತ್ತು ವರುಣ ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಚಿಲ್ಲರೆ ಅಂಗಡಿಗಳು ಅಕ್ರಮ ಮಧ್ಯದ ಅಂಗಡಿಗಳ ತಾಣವಾಗುತ್ತಿದೆ.ರೈತರು ಕೂಲಿ ಕಾರ್ಮಿಕರು ದುಡಿದ ಹಣವನ್ನು ಅಕ್ರಮ ಮಧ್ಯದ ಚಿಲ್ಲರ ಅಂಗಡಿಗಳ ಖಜಾನೆ ಸೇರುತ್ತಿದೆ.ಸಿಎಂ ತವರು ಕ್ಷೇತ್ರದಲ್ಲಿ ಸಂಪೂರ್ಣವಾಗಿ ಅಕ್ರಮ ಮಧ್ಯ ಮಾರಾಟವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ತಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಂದಾಯ ಇಲಾಖೆಯಲ್ಲಿ ಮತ್ತು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮಧ್ಯವರ್ತಿ ದಲ್ಲಾಳಿಗಳ ಹಾವಳಿ ಎಲ್ಲೆ ಮೀರಿದೆ, ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲಿ ರೈತರ ಬಡವರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ.ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ನಂಜನಗೂಡು ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ಶಾಲಾ ಕೊಠಡಿಗಳು ಶಿಥಲವಾಗಿವೆ. ಕೆಲವು ಶಾಲೆಗಳಿಗೆ ರಸ್ತೆಗಳ ಸಂಪರ್ಕವನ್ನೇ ಕಲ್ಪಿಸಿಲ್ಲ. ಬದುಕಿರುವವರಿಗೆ ಮರಣ ಪತ್ರ ನೀಡಿ ರಾಜ್ಯಮಟ್ಟದಲ್ಲಿ ಸುದ್ದಿಯಾಗಿರುವ ಕಂದಾಯ ಇಲಾಖೆಯ ಅಧಿಕಾರಿ ಪ್ರಕಾಶ ಎಂಬವರನ್ನು ಅಮಾನತು ಪಡಿಸದೆ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ರೆವಿನ್ಯೂ ಅಧಿಕಾರಿಗಳ ಬಳಿ ಬಡವರು ಕೆಲಸ ಮಾಡಿಸಿಕೊಳ್ಳುವುದು ದುಃಸ್ಸಾಹಸವಾಗಿದೆ.
ಎಂದು ಆರೋಪಿಸಿ ನೂರಾರು ಸಾಲು ಸಾಲು ಸಮಸ್ಯೆಗಳನ್ನು ಮೈಸೂರಿನ ನೂತನ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರ ಬಳಿ ನೋಂದವರು ಅರ್ಜಿಯನ್ನು ನೀಡಿದರು.ಕೆಲ ಸಮಸ್ಯೆಗಳನ್ನು ಆಲಿಸಿದ ನೂತನ ಲಕ್ಷ್ಮಿಕಾಂತ ರೆಡ್ಡಿ ಸ್ಥಳದಲ್ಲೇ ಸಮಸ್ಯೆ ಬಗೆ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಇದೇ ವೇಳೆ ಮಾತನಾಡಿ ಸಿಎಂ ತವರು ಕ್ಷೇತ್ರವಾಗಿರುವ ಕಾರಣ ಮೈಸೂರು ಜಿಲ್ಲೆಯ ಎಲ್ಲಾ ಇಲಾಖೆ ಅಧಿಕಾರಿಗಳು ಜಾಗೃತಿಯಿಂದ ಜನರ ಸೇವೆ ಮಾಡಬೇಕು ಬಂದವರ ಕಷ್ಟ ಪರಿಹರಿಸುವ ಸಲುವಾಗಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಕೆಲಸ ಮಾಡುತ್ತಿದ್ದೇವೆ ಎಲ್ಲಿ ಸರ್ಕಾರಿ ಸೇವೆಯಲ್ಲಿ ಲೋಪ ಬರುತ್ತದೆ ಅದನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿ ಸಭೆಯಲ್ಲಿದ್ದ ಸಾರ್ವಜನಿಕರಿಗೆ ಅಭಯ ನೀಡಿದರು.ಜನಸ್ಪಂದನ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕೆ.ಆರ್.ರಕ್ಷಿತ್, ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಾಯತ್ರಿ, ಉಪ ಕಾರ್ಯದರ್ಶಿ ಡಾ
ಕೃಷ್ಣರಾಜು,ತಹಸಿಲ್ದಾರ್ ಶಿವಕುಮಾರ್ ಕಾಸ್ನೋರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್,ಸಿಡಿಪಿಓ ಇಲಾಖೆಯ ಭವ್ಯಶ್ರೀ, ಆರೋಗ್ಯ ಇಲಾಖೆಯ ಈಶ್ವರ್ ಸರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಿದ್ದರು…

Spread the love

Related post

ಕಳುವು ಮಾಲು ಮಾರಾಟ ಮಾಡಲು ಸಹಕರಿಸಿದ ಪ್ರಕರಣ…ಅಶೋಕಾಪುರಂ ಠಾಣೆ ಮುಖ್ಯಪೇದೆ ರಾಜು ಸಸ್ಪೆಂಡ್…

ಕಳುವು ಮಾಲು ಮಾರಾಟ ಮಾಡಲು ಸಹಕರಿಸಿದ ಪ್ರಕರಣ…ಅಶೋಕಾಪುರಂ ಠಾಣೆ ಮುಖ್ಯಪೇದೆ ರಾಜು…

ಮೈಸೂರು,ಸೆ7,Tv10 ಕನ್ನಡ ಕಳುವು ಮಾಡಿದ ಚಿನ್ನಾಭರಣಗಳನ್ನ ಮಾರಾಟ ಮಾಡಲು ಸಹಕರಿಸಿದ ಆರೋಪದ ಮೇಲೆ ಅಶೋಕಾಪುರಂ ಠಾಣೆ ಮುಖ್ಯಪೇದೆ ರಾಜು ಅಮಾನತುಪಡಿಸಿ ಆದೇಶ ಹೊರಡಿಸಲಾಗಿದೆ.ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್…
ಕೊಲೆ ಆರೋಪಿ ಅಂದರ್…ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಕೊಲೆ ಆರೋಪಿ ಅಂದರ್…ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ನಂಜನಗೂಡು,ಸೆ7,Tv10 ಕನ್ನಡ ಅಕ್ರಮ ಸಂಭಂಧ ಹಿನ್ನಲೆ ವ್ಯಕ್ತಿಯನ್ನ ಮೊಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ನಂಜನಗೂಡು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ಮಹದೇವ ಶೆಟ್ಟಿ (45) ಬಂಧಿತ…
ಗೌರಿಗಣೇಶ ಹಬ್ಬ ಹಿನ್ನೆಲೆ: ದಸರಾ ಆನೆಗಳಿಗೆ ವಿಶೇಷ ಪೂಜೆ …

ಗೌರಿಗಣೇಶ ಹಬ್ಬ ಹಿನ್ನೆಲೆ: ದಸರಾ ಆನೆಗಳಿಗೆ ವಿಶೇಷ ಪೂಜೆ …

ಮೈಸೂರು,ಸೆ7,Tv10 ಕನ್ನಡಗೌರಿ ಗಣೇಶ ಹಬ್ಬವಾದ ಇಂದು ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ದಸರಾ ಗಜಪಡೆಗೆ ವಿಶೇಷ ಪೂಜೆ ನೆರವೇರಿಸಲಾಯಿತು.ಅಭಿಮನ್ಯು ನೇತೃತ್ವದ ಎಲ್ಲಾ ಹದಿನಾಲ್ಕು ಆನೆಗಳಿಗೂ ಪೂಜೆ ನೆರವೇರಿಸಲಾಯಿತು.ಮೈಸೂರು ಜಿಲ್ಲಾಧಿಕಾರಿ…

Leave a Reply

Your email address will not be published. Required fields are marked *