ಮೊದಲ ಆಷಾಢ ಶುಕ್ರವಾರ…25 ಸಾವಿರ ಭಕ್ತರಿಗೆ ಮೈಸೂರ್ ಪಾಕ್ ವಿತರಣೆ…
- MysoreTV10 Kannada Exclusive
- July 11, 2024
- No Comment
- 128
ಮೈಸೂರು,ಜು11,Tv10 ಕನ್ನಡಮೊದಲ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ವಿತರಿಸಲು 25 ಸಾವಿರ ಮೈಸೂರು ಪಾಕ್ ತಯಾರಾಗಿದೆ.ಪ್ರತಿ ವರ್ಷ ಆಷಾಢ ಮಾಸದ ಮೊದಲ ಶುಕ್ರವಾರದಂತೆ ಈ ಬಾರಿಯೂ ಚಾಮುಂಡಿ ಬೆಟ್ಟದಲ್ಲಿ 100 ಅಡಿ ರಸ್ತೆಯ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ 25000 ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ.ಅಲ್ಲದೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅನ್ನ ಸಂತರ್ಪಣೆಯ ಜೊತೆಗೆ ಮೈಸೂರು ಪಾಕ್ ವಿತರಿಸಲಾಗುತ್ತದೆ. ಹೀಗಾಗಿ ಇಂದು ನಿತ್ಯಾನಂದ ಕಲ್ಯಾಣ ಮಂಟಪದಲ್ಲಿಮೈಸೂರುಪಾಕ್ ತಯಾರಿಸಿಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆ ತನಕ ಟಿಫನ್ ಇರುತ್ತದೆ. ಪೊಂಗಲ್, ಇಡ್ಲಿ, ಚಟ್ನಿಯನ್ನು ಭಕ್ತಾಧಿಗಳಿಗೆ ನೀಡಲಾಗುತ್ತದೆ. ಹನ್ನೊಂದು ಗಂಟೆಯ ನಂತರ ಊಟವನ್ನು ಪ್ರಾರಂಭಿಸಲಾಗುತ್ತದೆ. ಊಟಕ್ಕೆ ಪಲ್ಯ, ಕೋಸಂಬರಿ ಚಟ್ನಿ, ಬಿಸಿಬೇಳೆ ಬಾತ್, ಅನ್ನ, ಸಾಂಬಾರ್, ಮೊಸರು, ಲಾಡುಮೈಸೂರುಪಾಕು ಉಣ ಬಡಿಡಿಸಲಾಗುತ್ತದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ರ ತನಕ ಪ್ರಸಾದ ವಿತರಿಸಲಾಗುತ್ತದೆ. ಭಕ್ತಾದಿಗಳೆಲ್ಲರಿಗೂ ಬಾಳೆ ಎಲೆಯಲ್ಲಿ ಊಟವನ್ನು ಹಾಕಲಾಗುತ್ತದೆ ಎಂದು ಚಾಮುಂಡೇಶ್ವರಿ ಸೇವಾ ಸಮಿತಿಯ ಸದಸ್ಯರುಗಳಾದ ಅರುಣ್ ಹಾಗೂ ನಾಗೇಶ್ ತಿಳಿಸಿದ್ದಾರೆ. ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ 25000 ಮೈಸೂರುಪಾಕುಗಳನ್ನು ತಯಾರಿಸಲಾಗಿದೆ. ಇದಕ್ಕಾಗಿ 200 ಕೆಜಿ ಕಡಲೆ ಹಿಟ್ಟು, 500 ಕೆಜಿ ಸಕ್ಕರೆ, 30 ಕೆಜಿ ರಿಫೈಂಡ್ ಆಯಿಲ್, ನೂರು ಕೆಜಿ ಡಾಲ್ಡಾ ತುಪ್ಪ, ನೂರು ಕೆಜಿ ಬೆಣ್ಣೆ ಕಾಯಿಸಿದ ತುಪ್ಪ, 3 ಕೆಜಿ ಏಲಕ್ಕಿ, 2 ಕೆಜಿ ಅರಿಶಿನ ಪುಡಿ ಮೊದಲಾದ ಸಾಮಗ್ರಿಗಳನ್ನು ಬಳಸಿಕೊಳ್ಳಲಾಗಿದೆ. 40 ಜನ ನುರಿತ ಬಾಣಸಿಗರಿಂದ 25,000 ಮೈಸೂರುಪಾಕ್ ಅನ್ನು ತಯಾರಿಸಲಾಗಿದೆ…