ಒಂದೇ ಸ್ಥಾನದಲ್ಲಿ 5 ವರ್ಷ ಅವಧಿ ಪೂರೈಸಿ ಮುಂದುವರೆಯುತ್ತಿರುವ ಅಧಿಕಾರಿ/ನೌಕರರ ಮೇಲೆ ಸರ್ಕಾರದ ಕಣ್ಣು…ಪಟ್ಟಿ ನೀಡುವಂತೆ ಸಿಎಂ ಸೂಚನೆ…

ಒಂದೇ ಸ್ಥಾನದಲ್ಲಿ 5 ವರ್ಷ ಅವಧಿ ಪೂರೈಸಿ ಮುಂದುವರೆಯುತ್ತಿರುವ ಅಧಿಕಾರಿ/ನೌಕರರ ಮೇಲೆ ಸರ್ಕಾರದ ಕಣ್ಣು…ಪಟ್ಟಿ ನೀಡುವಂತೆ ಸಿಎಂ ಸೂಚನೆ…

ಒಂದೇ ಸ್ಥಾನದಲ್ಲಿ 5 ವರ್ಷ ಅವಧಿ ಪೂರೈಸಿ ಮುಂದುವರೆಯುತ್ತಿರುವ ಅಧಿಕಾರಿ/ನೌಕರರ ಮೇಲೆ ಸರ್ಕಾರದ ಕಣ್ಣು…ಪಟ್ಟಿ ನೀಡುವಂತೆ ಸಿಎಂ ಸೂಚನೆ…ಮೈಸೂರು,ಜು11,Tv10 ಕನ್ನಡಒಂದೇ ಹುದ್ದೆ ಅಥವಾ ಸ್ಥಾನದಲ್ಲಿ 5 ವರ್ಷ ಅವಧಿ ಮೀರಿ ಕೆಲಸ ಮುಂದುವರೆಸಿರುವ ಅಧಿಕಾರಿ/ನೌಕರರ ವಿವರಗಳನ್ನ ನೀಡುವಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಲಾಗಿದೆ.ಅಂತಹವರ ವಿರುದ್ದ ದೂರುಗಳು ಬಂದಿದ್ದರೂ ವಿವರ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯ ತಿಳಿಸಿದ್ದಾರೆ.ಅಲ್ಲದೆ ಜನರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಇತ್ಯರ್ಥಪಡಿಸಲು ಹಾಗೂ ಜಿಲ್ಲಾಮಟ್ಟದ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿರುವಂತೆ ಸಮನ್ವಯ ಸಾಧಿಸುವಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತಮ್ಮ ಅಧೀನ ಅಧಿಕಾರಿಗಳಿಗೆ/ಸಿಬ್ಬಂದಿಗಳಿಗೆ ಸೂಚನೆ ನೀಡುವಂತೆ ಸಭೆಯಲ್ಲಿ ತಿಳಿಸಲಾಗಿದೆ.ಕಾರ್ಯಕ್ಷಮತೆಯಲ್ಲಿ ಶಿಸ್ತು ಪಾಲಿಸಲು ಕ್ರಮ ಕೈಗೊಳ್ಳುವ ಮತ್ತು ನಿರ್ಲಕ್ಷ್ಯತೆ ವಹಿಸುವ ಅಧಿಕಾರಿ/ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.ಯಾವುದೇ ಅಧಿಕಾರಿ/ ಸಿಬ್ಬಂದಿವರ್ಗದಲ್ಲಿ ಅಸಮರ್ಥತೆ ಕಂಡುಬಂದರೆ ಅಂಥಹವರನ್ಮ ವರ್ಗಾವಣೆ ಮಾಡುವ ಕುರಿತಂತೆ ಪ್ರಸ್ತಾವನೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ…

Spread the love

Related post

ದಸರಾ ವೇಳೆ ಅನಾಹುತ ಬೆದರಿಕೆ…ಅನಾಮಧೇಯ ವ್ಯಕ್ತಿಯಿಂದ ಪೋಸ್ಟ್

ದಸರಾ ವೇಳೆ ಅನಾಹುತ ಬೆದರಿಕೆ…ಅನಾಮಧೇಯ ವ್ಯಕ್ತಿಯಿಂದ ಪೋಸ್ಟ್ ಮೈಸೂರು,ಅ13,Tv10 ಕನ್ನಡ ದಸರಾ ವೇಳೆ ಅನಾಹುತ ಸೃಷ್ಠಿಸುವುದಾಗಿ ಅನಾಮಧೇಯ ವ್ಯಕ್ತಿ ಬೆದರಿಕೆ ಸಂದೇಶ ಪೋಸ್ಟ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಈ…
ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ… ಮೈಸೂರು,ಅ12,Tv10 ಕನ್ನಡ ಮಹಿಳೆಯನ್ನ ಲಾಡ್ಜ್ ನಲ್ಲಿ ಭೀಕರವಾಗಿ ಕೊಂ* ಘಟನೆ ಮೈಸೂರಿ ನಲ್ಲಿ ನಡೆದಿದೆ.ಕೃತ್ಯವೆಸಗಿದ ನಂತರ ಪರಾರಿಯಾಗಿದ್ದ ಪ್ರಿಯತಮನನ್ನ 24…
ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ… ಮೈಸೂರು,ಅ4,Tv10 ಕನ್ನಡ ಮೈಸೂರಿನ ಗೋಕುಲಂನಲ್ಲಿ ಜನರ ತಂಡ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ…

Leave a Reply

Your email address will not be published. Required fields are marked *