
ನಾಲೆಯಲ್ಲಿ ಕೊಚ್ಚಿಹೋದ ಮಗು…ಆಟವಾಡುತ್ತುದ್ದ ವೇಳೆ ಘಟನೆ…ಪೊಲೀಸರಿಂದ ಶೋಧನಾ ಕಾರ್ಯ…
- CrimeNews
- July 13, 2024
- No Comment
- 88
ಮಂಡ್ಯ,ಜು12,Tv10 ಕನ್ನಡ
ನಾಲೆಯಲ್ಲಿ ಆಟವಾಡುತ್ತಿದ್ದ ಮಗು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಮಂಡ್ಯದ ಹೊಂಗಳ್ಳಿಮಠ ಗ್ರಾಮದ ವಿಸಿ ನಾಲೆಯಲ್ಲಿ ನಡೆದಿದೆ.ರಾಜು ಎಂಬುವವರ ಮಗ ಸಬ್ಬಿನ್ ರಾಜ್(4) ಕೊಚ್ಚಿಹೋದ ಮಗು.ವಿಸಿ ನಾಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಇರಲಿಲ್ಲ.ಹೀಗಾಗಿ ನಾಲೆಯಲ್ಲಿ ಮಗು ಆಟವಾಡುತ್ತಿತ್ತು.
ಮೊನ್ನೆಯಿಂದ ವಿಸಿ ನಾಲೆಗೆ ನೀರು ಹರಿವು ಹೆಚ್ಚಿಸಲಾಗಿತ್ತು.
ನಿನ್ನೆ ಸಂಜೆ ಏಕಾ ಏಕಿ ನೀರಿನ ಹರಿವು ಹೆಚ್ಚಾದ ಹಿನ್ನಲೆ ಮಗು ಕೊಚ್ಚಿಹೋಗಿದೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಮಗುವಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ…