ಹುಲಿ ದಾಳಿ…ಹಸು ಬಲಿ…ಗ್ರಾಮಸ್ಥರಲ್ಲಿ ಆತಂಕ…
- CrimeMysore
- July 20, 2024
- No Comment
- 327
ಹೆಚ್.ಡಿ.ಕೋಟೆ,ಜು20,Tv10 ಕನ್ನಡ
ಹುಲಿ ದಾಳಿಗೆ ಹಸು ಬಲಿಯಾದ ಘಟನೆ ಹೆಚ್.ಡಿ.ಕೋಟೆ ಯಲ್ಲಿ ನಡೆದಿದೆ. ಪಟ್ಟಣದಿಂದ ಕೇವಲ 1ಕಿಮೀ ಅಂತರದ ಕೃಷ್ಣಪುರ ಗ್ರಾಮದ ಜಮೀನಿನಲ್ಲಿ ಘಟನೆ ನಡೆದಿದ್ದು ಸ್ಥಳೀಯರು ಆತಂಕಕ್ಕೆ
ಸಿಲುಕಿದ್ದಾರೆ.ರಾಮಸ್ವಾಮಿ ಎಂಬುವವರು ಗುತ್ತಿಗೆ ಆಧಾರದ ಮೇಲೆ ಕೃಷಿ ಚಟುವಟಿಕೆ ನಡೆಸುತ್ತಿರು ಜಮೀನಿಲ್ಲಿ ಘಟನೆ ನಡೆದಿದೆ. ಕೊಟ್ಟಿಗೆಯಲ್ಲಿ ಕಟ್ಟಿರುವ ಹಸು ಮೇಲೆ ದಾಳಿ ನಡೆಸಿ ಕೊಂದಿದೆ
ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಹಿಂಬಧಿಯ ಬಾಲು ಎಂಬುವವರ ಜಮೀನಿನಲ್ಲೂ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ.ಹಸುವಿನ ದಾಳಿ ನಂತರ ಜೋಳದ ಜಮೀನಿನಲ್ಲಿ ಹುಲಿ ಆಶ್ರಯ ಪಡೆದಿದೆ.
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯಿಂದ ಹುಲಿ ಚಲನವಲನ ಗಮನಿಸಲು ಸಿ.ಸಿ ಕ್ಯಾಮರ ಅಳವಡಿಸಿದ್ದಾರೆ.
ಪಟ್ಟಣದಲ್ಲೇ ವಾಸ್ತವ್ಯ ಹೂಡಿರುವ ಹುಲಿ ಚಲನವಲನದಿಂದ ಜನ ಆತಂಕಕ್ಕೆ ಸಿಲುಕಿದ್ದಾರೆ. ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ…