
ಮಹಿಳೆ ಬರ್ಭರ ಹತ್ಯೆ…ನಗದು ಚಿನ್ನಾಭರಣ ದೋಚಿದ ಹಂತಕರು…
- CrimeMysore
- July 21, 2024
- No Comment
- 189
ಪಿರಿಯಾಪಟ್ಟಣ,ಜು21,Tv10 ಕನ್ನಡ
ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಮಹಿಳೆಯೋರ್ವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಭಾಗ್ಯವತಿ (32) ಕೊಲೆಯಾದ ಮಹಿಳೆ.
ಪಿರಿಯಾಪಟ್ಟಣ ತಾಲ್ಲೂಕು ಚೌಥಿ ಗ್ರಾಮದಲ್ಲಿ ಘಟನೆ ನಡೆದಿದೆ.
5 ವರ್ಷದ ಹಿಂದೆ ಅಪಘಾತದಲ್ಲಿ ಇವರ ಪತಿ ಮೃತಪಟ್ಟಿದ್ದರು.
ಇತ್ತೀಚೆಗೆ ಭಾಗ್ಯವತಿ ಅವರಿಗೆ ಪತಿಯ ವಿಮೆ ಹಣ ಬಂದಿತ್ತು.
ಇದಕ್ಕಾಗಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕೊಲೆ ನಂತರ ಮನೆಯಲ್ಲಿದ್ದ ವಿಮೆ ಹಣ ಚಿನ್ನಾಭರಣ ಕಳ್ಳತನವಾಗಿದೆ.
ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ಅನುಮಾನಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ…