
ಸಾಲಗಾರರಿಗೆ ಹೆದರಿ ಡೆತ್ ನೋಟ್ ಬರೆದು ನಾಪತ್ತೆಯಾದ ಆಟೋ ಡ್ರೈವರ್ ಶವವಾಗಿ ಪತ್ತೆ…ಆತ್ಮಹತ್ಯೆ ಶಂಕೆ…
- CrimeMysore
- July 27, 2024
- No Comment
- 320
ಹುಣಸೂರು,ಜುಲೈ 27,Tv10 ಕನ್ನಡ
ಸಾಲಗಾರರ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ನಾಪತ್ತೆಯಾದ ಆಟೋಡ್ರೈವರ್ ಶವವಾಗಿ ಪತ್ತೆಯಾಗಿದ್ದಾರೆ.ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ
ವ್ಯಾಪ್ತಿಯ ಕಟ್ಟುವಾಡಿ ಗ್ರಾಮದಿಂದ ಜುಲೈ 20 ರಂದು ಕಾಣೆಯಾಗಿದ್ದ ಪ್ರಸಾದ್ ಹೆಚ್.ಡಿ.ಕೋಟೆಯ ಸರಗೂರಿನ ಕಪಿಲಾ ನದಿ ದಂಡೆ ಸೋಮೇಶ್ವರ ದೇವಸ್ಥಾನದ ಬಳಿ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ನನ್ನ ಸಾವಿಗೆ ಫೈನಾನ್ಸ್ ಮಧು ಹಾಗೂ ಟೆಂಪೋ ಕಿರಣ ಕಾರಣ ಎಂದು ಡೆತ್ ನೋಟ್ ಬರೆದು ಆಟೋದಲ್ಲಿ ಇಟ್ಟು ನಾಪತ್ತೆಯಾಗಿದ್ದರು.ಫೈನಾನ್ಸ್ ಮಧು ಬಳಿ ಕಿರಣ್ ಜಾಮೀನು ನೀಡಿ ಹಣ ಸಾಲ ಕೊಡಿಸಿದ್ದ.ನಿಗದಿತ ಸಮಯಕ್ಕೆ ಹಣ ಹಿಂದಿರುಗಿಸಿಲ್ಲ.ಹೀಗಾಗಿ ಕಿರಣ್ ಆಗಾಗ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ.ಇದರಿಂದ ಬೇಸತ್ತ ಪ್ರಸಾದ್ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದರು.ಇಂದು ಹೆಚ್.ಡಿ.ಕೋಟೆ ಸರಗೂರಿನಲ್ಲಿ ಪ್ರಸಾದ್ ಮೃತದೇಹ ದೊರೆತಿದೆ.ಪ್ರಸಾದ್ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ.ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…