
ಮುಡಾ ದೈನಂದಿನ ಕೆಲಸಗಳಿಗೆ ಗ್ರೀನ್ ಸಿಗ್ನಲ್…ನಿಯಮಾನುಸಾರ ಕಾರ್ಯನಿರ್ವಹಿಸುವಂತೆ ಆದೇಶ…
- TV10 Kannada Exclusive
- August 4, 2024
- No Comment
- 305
ಮೈಸೂರು,ಆ4,Tv10 ಕನ್ನಡ
ಸಾರ್ವಜನಿಕರ ದೈನಂದಿನ ಕೆಲಸ
ಕಾರ್ಯಗಳನ್ನ ನಿಯಮಾನುಸಾರ ಕೈಗೊಳ್ಳುವಂತೆ ಮುಡಾ ಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.ಈ ಹಿಂದೆ ವಿಧಿಸಲಾದ ಕೆಲವು ಷರತ್ತುಗಳನ್ನ ಹೊರತು ಪಡಿಸಿ ಕಂದಾಯ ಪಾವತಿ,ಕಟ್ಟಡ ವಿನ್ಯಾಸ ನಕ್ಷೆ ಅನುಮೋದನೆ,ನ್ಯಾಯಾಲಯದ ಕಡತಗಳು,ಅನ್ಯಕ್ರಾಂತ ಅಭಿಪ್ರಾಯ ನೀಡುವ ಕಡತಗಳು,ಲೋಕ ಅದಾಲತ್ ಪ್ರಕರಣಗಳು ಹಾಗೂ ಮಾಹಿತಿ ಹಕ್ಕು ಪ್ರಕರಣಗಳಿಗೆ ಸಂಭಂಧಿಸಿದಂತೆ ಸಾರ್ವಜನಿಕರಿಂದ ಬರುತ್ತಿರುವ ದೂರು ಮತ್ತು ಅಹವಾಲು ಸ್ವೀಕರಿಸುವ ವಿಚಾರದಲ್ಲಿ ನೀಡಿರುವ ನಿರ್ದೇಶನಗಳಿಗೆ ವಿನಾಯಿತಿ ನೀಡುವ ವಿಚಾರದಲ್ಲಿ ಸರ್ಕಾರ ಸ್ಪಂದಿಸಿದೆ.ನಗರಾಭಿವೃದ್ದಿ ಪ್ರಾಧಿಕಾರದ ಕಾಯ್ದೆ 1987 ಅನ್ವಯದಂತೆ ನಿಯಮ,ಮಾರ್ಗಸೂಚಿಗಳು ಉಲ್ಲಂಘನೆ ಆಗದಂತೆ ನಿಯಮಾನುಸಾರ ಕಾರ್ಯ ನಿರ್ವಹಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಲತಾ ರವರು ಮುಡಾ ಆಯುಕ್ತರಿಗೆ ಪತ್ರ ಬರೆದು ದೈನಂದಿನ ಕೆಲಸ ಕಾರ್ಯಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಈ ಹಿಂದೆ ವಿಧಿಸಲಾಗಿದ್ದ ಷರತ್ತುಗಳನ್ನ ಮುಡಾ ಪಾಲಿಸಬೇಕಿದೆ.ಯಾವುದೇ ಸಭೆಗಳನ್ನ ನಡೆಸಬಾರದು, ಪ್ರಸ್ತುತ ಹಂತದಲ್ಲಿರುವ ಯಾವುದೇ ಕಡತಗಳ ತೀರ್ಮಾನ ಕೈಗೊಳ್ಳಬಾರದು,ಈ ಹಿಂದೆ ಕೈಗೊಂಡ ಸಾಮಾನ್ಯ ಸಭೆ ತೀರ್ಮಾನಗಳನ್ನ ಅನುಷ್ಠಾನಗೊಳಿಸಬಾರದು ಹಾಗೂ ಸರ್ಕಾರದ ನಿರ್ದೇಶನವಿಲ್ಲದೆ ಯಾವುದೇ ನಿವೇಶನಗಳ ವಿಲೇವಾರಿ ಕುರಿತು ಕ್ರಮ ಜರುಗಿಸಬಾರದೆಂಬ ಷರತ್ತುಗಳನ್ನ ಮುಂದುವರೆಸಲಾಗಿದೆ…