ಹೆತ್ತ ತಾಯಿಗೆ ಮಗಳ ಅಶ್ಲೀಲ ಫೋಟೋ ರವಾನಿಸಿದ ಪ್ರಿಯಕರ…ಮದುವೆ ನಿರಾಕರಿಸಿದ್ದಕ್ಕೆ ಸೇಡು…!

ಹೆತ್ತ ತಾಯಿಗೆ ಮಗಳ ಅಶ್ಲೀಲ ಫೋಟೋ ರವಾನಿಸಿದ ಪ್ರಿಯಕರ…ಮದುವೆ ನಿರಾಕರಿಸಿದ್ದಕ್ಕೆ ಸೇಡು…!

ಯುವಕನ ದುರ್ವರ್ತನೆಗೆ ಬೇಸತ್ತು ಮದುವೆ ನಿರಾಕರಿಸಿದ ಹಿನ್ನಲೆ ಪ್ರಿಯಕರ ತನ್ನ ಪ್ರಿಯಕರಳ ಅಶ್ಲೀಲ ಫೋಟೋವನ್ನ ಹೆತ್ತ ತಾಯಿಗೆ ರವಾನಿಸಿ ಸೇಡು ತೀರಿಸಿಕೊಂಡ ಘಟನೆ ಎನ್.ಆರ್.ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಯ್ಡುನಗರದಲ್ಲಿ ನಡೆದಿದೆ.ಮಗಳ ಅಶ್ಲೀಲ ಫೋಟೋ ನೋಡಿ ದಂಗಾದ ಹೆತ್ತ ತಾಯಿ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಅಳಿಯನಾಗಬೇಕಿದ್ದ ಪ್ರಿಯಕರನ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಕಲ್ಯಾಣಗಿರಿ ನಿವಾಸಿ ಮೊಹಮದ್ ವಾಸೀಂ ಮೇಲೆ ಎಫ.ಐ.ಆರ್.ದಾಖಲಾಗಿದೆ.

ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ನೊಂದ ಯುವತಿಗೆ ಮೊಹಮದ್ ವಾಸೀಂ ಪರಿಚಯವಾಗಿದ್ದಾನೆ.ಇಬ್ಬರೂ ಒಂದೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಸಲುಗೆ ಬೆಳೆದಿದೆ.ಯುವತಿಯನ್ನ ಮದುವೆ ಆಗಲು ನಿರ್ಧರಿಸಿ ಹೆತ್ತ ತಾಯಿಯನ್ನ ಸಂಭಂಧ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.ಪ್ರಾರಂಭದಲ್ಲಿ ನಿರಾಕರಿಸಿದ ತಾಯಿ ನಂತರ ಹುಡುಗನ ಮನೆಯವರ ಒತ್ತಡಕ್ಕೆ ಮಣಿದು ಒಪ್ಪಿಗೆ ಸೂಚಿಸಿದ್ದಾರೆ.ನಿಶ್ಚಿತಾರ್ಥವಾದ ನಂತರ ಇಬ್ಬರೂ ಸುತ್ತಾಡಿದ್ದಾರೆ.ಈ ವೇಳೆ ಯುವತಿಯ ಅಶ್ಲೀಲ ಫೋಟೋ ಪಡೆಯುವಲ್ಲಿ ಮಹಮದ್ ವಾಸೀಂ ಯಶಸ್ವಿಯಾಗಿದ್ದಾನೆ.ಕೆಲವು ದಿನಗಳಲ್ಲಿ ಮಹಮದ್ ವಾಸೀಂ ವರ್ತನೆ ಬೇಸರಕ್ಕೆ ಕಾರಣವಾಗಿ ಮದುವೆ ನಿರಾಕರಿಸಿದ್ದಾರೆ.ಆದರೆ ಪಟ್ಟು ಬಿಡದ ಮಹಮದ್ ವಾಸೀಂ ಮದುವೆ ಮಾಡಿಕೊಡಿ ಇಲ್ಲಾಂದ್ರೆ ಅಶ್ಲೀಲ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.ಮಹಮದ್ ವಾಸೀಂ ನ ಬೆದರಿಕೆಗೆ ಮಣಿಯದ ಹಿನ್ನಲೆ ಯುವತಿಯ ತಾಯಿಗೆ ಅಶ್ಲೀಲ ಫೋಟೋ ರವಾನಿಸಿ ಸೇಡು ತೀರಿಸಿಕೊಂಡಿದ್ದಾನೆ.ಮಗಳ ಫೋಟೋ ರವಾನಿಸಿದ ಮಹಮದ್ ವಾಸೀಂ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…
ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…

Leave a Reply

Your email address will not be published. Required fields are marked *