
ಸಿಎಂ ರಾಜಿನಾಮೆಗೆ ಬಿಜೆಪಿ ಜೆಡಿಎಸ್ ಪಾದಯಾತ್ರೆ…ಮೈಸೂರಲ್ಲಿ ಸಿದ್ದರಾಮಯ್ಯ ಇನ್ ರಿಲ್ಯಾಕ್ಸ್ ಮೂಡ್…
- TV10 Kannada Exclusive
- August 6, 2024
- No Comment
- 226
ಮೈಸೂರು,ಆ6,Tv10 ಕನ್ನಡಒಂದೆಡೆ ಸಿಎಂ ರಾಜೀನಾಮೆಗಾಗಿ ಬಿಜೆಪಿ ಜೆಡಿಎಸ್ ಪಾದಯಾತ್ರೆ ನಡೆಸುತ್ತಿದೆ.ಮತ್ತೊಂದೆಡೆ
ಸಿದ್ದರಾಮಯ್ಯ ಇದ್ಯಾವುದನ್ನೂ ತಲೆ ಕೆಡಿಸಿಕೊಳ್ಳದೆ ಮೈಸೂರಿನಲ್ಲಿ ರಿಲಾಕ್ಸ್ ಮೂಡ್‌ನಲ್ಲಿದ್ದಾರೆ.
ಮುಡಾ ಹಗರಣ ಆರೋಪ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗಾಗಿ ಬಿಜೆಪಿ ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ನಡೆಸುತ್ತಿದೆ.
ಸಿದ್ದರಾಮಯ್ಯ ಡೋಂಟ್ ಕೇರ್ ಎನ್ನುತ್ತಾ
ಮಾಜಿ ಶಾಸಕ ಹೆಚ್ ಪಿ ಮಂಜುನಾಥ್ ಕಾರಿನಲ್ಲಿ ಸಿಟಿ ರೌಂಡ್ಸ್ ನಲ್ಲಿದ್ದಾರೆ.
ಯಾವುದೇ ಅಂಗ ರಕ್ಷಕರಿಲ್ಲದೆ ಮೈಸೂರು ನಗರ ಸಂಚಾರ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಮಾಜಿ ಶಾಸಕ ಹೆಚ್ ಪಿ ಮಂಜುನಾಥ್ ಚಾಲಕರಾಗಿದ್ದಾರೆ.
ಕಾರಿನಲ್ಲೇ ಕುಳಿತು ಕಾಫೀ ಸವಿದು ಸಿಟಿ ಬೀಟ್ ಹಾಕಿದ್ದಾರೆ.
ಇದೇ ವೇಳೆ ವಿವಿಧ ಬೇಡಿಕೆ ಈಡೆಸುವಂತೆ
ಮೈಸೂರು ವಿವಿ ಕ್ರಾಫರ್ಡ್ ಭವನದ ಬಳಿ ಪ್ರತಿಭಟನೆ ನಡೆಸುತ್ತಿರುವ
ಅತಿಥಿ ಉಪನ್ಯಾಸಕರನ್ನ ಭೇಟಿ ಮಾಡಿ ಮನವಿ ಸ್ವೀಕರಿಸಿದ್ದಾರೆ…