ಸ್ವಾಮಿ ಶ್ರೀಕಂಠೇಶ್ವರ…ನಿನ್ನ ನೋಡಲು ಬರುವ ಭಕ್ತರಿಗೆ ಕೆಟ್ಟ ವ್ಯವಸ್ಥೆಯಿಂದ ಪರಿಹಾರ ಕೊಡು…ನಂಜುಂಡೇಶ್ವರನ ಹುಂಡಿಗೆ ಪರಮ ಭಕ್ತರಿಂದ ಪತ್ರಗಳು…
- TV10 Kannada Exclusive
- August 6, 2024
- No Comment
- 207
ನಂಜನಗೂಡು,ಆ6,Tv10 ಕನ್ನಡ
ದಕ್ಷಿಣಕಾಶಿ ನಂಜನಗೂಡಿನ ನಂಜುಂಡೇಶ್ವರನ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದೆ.ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹಿಸುವ
ನಂಜುಂಡೇಶ್ವರನಿಗೆ ಈ ಬಾರಿ ಪರಮ ಭಕ್ತರಿಂದ ಪತ್ರಗಳೂ ಸಹ ಸಲ್ಲಿಕೆಯಾಗಿದೆ.ನಿನ್ನ ನೋಡಲು ಬರುವ ಲಕ್ಷಾಂತರ ಭಕ್ತರಿಗೆ ಕಟ್ಟ ವ್ಯವಸ್ಥೆಯಿಂದ ಪರಿಹಾರ ನೀಡುವಂತೆ ಪತ್ರ ಬರೆದಿದ್ದಾರೆ.ಎಣಿಕೆ ವೇಳೆ ಅಧಿಕಾರಿಗಳಿಗೆ ಪತ್ರ ದೊರೆತಿದೆ.
ಒಂದು ಪತ್ರದಲ್ಲಿ ನನ್ನ ತಾತ,ನನ್ನ ತಂದೆ ನಾನು ಹಾಗೂ ನನ್ನ ಮಗ ಎಲ್ಲರೂ ನಿನ್ನ ಭಕ್ತರೇ.ಬಹಳ ದೂರದಿಂದ ನಿನ್ನ ಕಾಣಲು ಪ್ರತಿ ಹುಣ್ಣಿಮೆ ಹಾಗೂ ವಿಶೇಷ ದಿನಗಳಲ್ಲಿ ಬರುತ್ತೇವೆ.ತಂದೆ ನಿನ್ನ ದರುಶನದಿಂದ ನಮ್ಮ ಕಷ್ಟಗಳೆಲ್ಲಾ ದೂರವಾಗಿದೆ ಒಡೆಯ ಆದರೆ ನಿನ್ನ ನೋಡಲು ಬರುವಾಗ ತುಂಬಾ ಕಷ್ಟವಾಗುವುದು.ರಾತ್ರಿ ಮಲಗುವುದಕ್ಕೆ ಚಿಕ್ಕ ಜಾಗವೂ ಇರುವುದಿಲ್ಲ.ಬೆಳಿಗ್ಗೆ ಸ್ನಾನಕ್ಕೆ ಕಪಿಲಾ ನದಿಗೆ ಹೋದರೆ ಎಲ್ಲಿ ನೋಡಿದರೂ ಕಸ ಕಸ ಕಸ.ಹೆಂಗೋ ಸ್ನಾನ ಮಾಡಿದರೆ ನನ್ನ ಮಡದಿಗೆ,ತಾಯಿಗೆ ಬಟ್ಟೆ ಬದಲಿಸಲೂ ಜಾಗವಿಲ್ಲ.ಉರುಳು ಸೇವೆ ಮಾಡಲು ವ್ಯವಸ್ಥೆ ಇಲ್ಲ.ಇನ್ನೂ ಅನೇಕ ತೊಂದರೆಗಳು ಈ ಬಗ್ಗೆ ಅಧಿಕಾರಿಗಳಿಗೆ,ರಾಜಕಾರಿಣಿಗಳಿಗೆ ಪತ್ರ ಬರೆದು ಸಾಕಾಗಿದೆ.ಕೊನೆಯದಾಗಿ ನಿನಗೆ ನನ್ನ ಪತ್ರ ಬರೆದಿದ್ದೇನೆ.ನಮ್ಮಂತಹ ಲಕ್ಷಾಂತರ ಭಕ್ತರಿಗೆ ಕೆಟ್ಟ ವ್ಯವಸ್ಥೆಯಿಂದ ಪರಿಹಾರ ಕೊಡು ತಂದೆ.
ಇಂತಿ ನಿನ್ನ ಪರಮಭಕ್ತ..
ಎರಡನೇ ಪತ್ರದಲ್ಲಿ
ಅಸಂಖ್ಯಾತ ಭಕ್ತರನ್ಮ ಹೊಂದಿರುವ ನಿನಗೆ ಪ್ರತಿತಿಂಗಳು ಕೋಟ್ಯಾಂತರ ಹಣ ನಿನ್ನ ಮಡಿಲಿಗೆ ಹಾಕುತ್ತಿದ್ದಾರೆ.ಇದು ಸಂತಸದ ವಿಷಯ.ದೇವಾಲಯಕ್ಕೆ ಬರುವ ಭಕ್ತರಿಗೆ ಆಡಳಿತ ಮಂಡಳಿಯಿಂದವಯಾವುದೇ ಮೂಲಭೂತ ಸೌಕರ್ಯ ದೊರೆಯುತ್ತಿಲ್ಲ ಎಂಬ ಯಾತನೆ ಹಾಗೂ ತಳಮಳ ತರುವ ವಿಷಯವಾಗಿದೆ.ಭಕ್ತರು ತಂಗಲು ವ್ಯವಸ್ಥೆ ಇಲ್ಲ ಎಂಬ ಕೊರಗು ಇದೆ.ಇನ್ನು ದೇವಾಲಯದ ಸಿಬ್ಬಂದಿಗಳು ಭಕ್ತರನ್ನ ನಿಕೃಷ್ಟವಾಗಿ ಕಾಣುತ್ತಿದ್ದಾರೆ ಅವರಿಗೆ ಒಳ್ಳೆಯ ಬುದ್ದಿ ಕೊಡು.ಭಕ್ತರಿಂದ ಸಂಗ್ರಹವಾಗುವ ದೇಣಿಗೆ ಹಣದಲ್ಲಿ ವಸತಿ ಸಂಕೀರ್ಣ ನಿರ್ಮಿಸುವುದಾಗಿ ಹೇಳಿದ್ರು.ಇದೀಗ ವಸತಿ ಸಂಕೀರ್ಣಕ್ಕೆ ಜಾಗವಿಲ್ಲ ಎಂದು ಹೇಳುತ್ತಿರುವ ಆಡಳಿತ ಮಂಡಳಿಗೆ ವಸತಿ ಸಂಕೀರ್ಣ ನಿರ್ಮಿಸಲು ಪ್ರೇರಣೆ ನೀಡು ಹಾಗೂ ವಿವೇಕ ನೀಡು.ವಿಶೇಷ ದಿನಗಳಲ್ಲಿ ಬರುವ ಭಕ್ತರು ಪಡುವ ಕಷ್ಟಗಳನ್ನ ಅಧಿಕಾರಿಗಳು ನೋಡಿದರೆ ಅವರಿಗೆ ವಾಸ್ತವಾಂಶ ಅರಿವಾಗಲಿದೆ.ಹಾಗಾಗಿ ತುರ್ತಾಗಿ ವಸತಿ ಸಂಕೀರ್ಣ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲು ಅವರಿಗೆ ಬುದ್ದಿ ಕೊಡು ಎಂದು ಶ್ರೀಕಂಠೇಶ್ವರನಾದ ನಿಮ್ಮ ಬಳಿ ಪ್ರಾರ್ಥಿಸಿಕೊಳ್ಳುತ್ತೇನೆ..
ಇಂತಿ ಪರಮ ಭಕ್ತ…
ಶ್ರೀಕಂಠನ ಹುಂಡಿ ಹಣದಲ್ಲಿ ಪತ್ರದ ಮೂಲಕ ಮಾಡಿದ ಭಕ್ತರ ಮನವಿ ಅಧಿಕಾರಿಗಳು ಹಾಗೂ ರಾಜಕಾರಿಣಿಗಳ ಕಣ್ಣು ತೆರೆಸಲಿದೆಯೇ ಕಾದು ನೋಡಬೇಕಿದೆ…