ತಮಿಳುನಾಡಿಗೆ 150 tmc ನೀರು ಬಿಟ್ಟಿದ್ದೇವೆ…ಡಿ.ಕೆ.ಶಿವಕುಮಾರ್…
- TV10 Kannada Exclusive
- August 9, 2024
- No Comment
- 201
ಮಂಡ್ಯ,ಆ9,Tv10 ಕನ್ನಡ
ತಮಿಳುನಾಡಿಗೆ ನಾವು ಈ ವರ್ಷದ 177.25 tmc ಪೈಕಿ
150 tmc ನೀರು ಬಿಟ್ಟಿದ್ದೀವಿ.
ನಮಗಿರೊ ಮಾಹಿತಿ ಪ್ರಕಾರ
ನೀರು ಮೆಟ್ಟೂರು ಡ್ಯಾಂ ನಿಂದ ಸಮುದ್ರ ಸೇರಿದೆ ಎಂದು ಕೆ.ಆರ್.ಎಸ್.ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ತಮಿಳುನಾಡು ಒಪ್ಪಿಸಿದ್ರೆ ಕೇಂದ್ರದಿಂದ ಅನುಮತಿ ಕೊಡುಸ್ತೀನಿ ಎಂಬ ಹೆಚ್ ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ
ಅವರು ದೊಡ್ಡವರು ದೊಡ್ಡವರ ವಿಚಾರ ಬೇಡ
ನಾವು ಕಾನೂನು ಮೂಲಕ ಹೋರಾಟ ಮಾಡ್ತಿವಿ.
ಬರೀ ಬುಡುಬುಡುಕೆ ಮಾತು ಎಂದು ವಾಗ್ಧಾಳಿ ಮಡೆಸಿದರು.ಖಾಲಿ ಮಾತಾಡ್ಕೊಂಡು ರೈತರ ಪರವಾಗಿ ಒಂದೇ ಒಂದು ಕೆಲಸ ಮಾಡಿದ್ದೇ ಇಲ್ಲ
ಈಗ ಒಂದು ಬಾರಿ ಪಂಚೆಕಟ್ಟಿರೋದನ್ನ ಬಿಟ್ಟರೆ ಬೇರೆ ಏನೂ ಮಾಡಿಲ್ಲ.
ನಮಗೆ ಶಕ್ತಿ ಇದೆ ಕರ್ನಾಟಕ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು…