ರಸ್ತೆ ದಾಟುತ್ತಿದ್ದ ವೃದ್ದನ ಮೇಲೆ ಹರಿದ ಸಾರಿಗೆ ಬಸ್…ಸ್ಥಳದಲ್ಲೆ ಸಾವು…
- CrimeMysore
- August 10, 2024
- No Comment
- 64
ಹುಣಸೂರು,ಆ10,Tv10 ಕನ್ನಡ
ರಸ್ತೆ ದಾಟುತ್ತಿದ್ದ ವೃದ್ದನ ಮೇಲೆ ಕೆಎಸ್ ಆರ್ ಟಿಸಿ ಬಸ್ ಹರಿದು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಮೈಸೂರು ಹುಣಸೂರು ಮುಖ್ಯ ರಸ್ತೆಯ ಬನ್ನಿಕುಪ್ಪೆ ಬಳಿ ನಡೆದಿದೆ.ತಮಿಳುನಾಡು ಮೂಲದ ದೊರೆಸ್ವಾಮಿ(67) ಮೃತ ದುರ್ದೈವಿ.ಮಗಳ ಮನೆಗೆ ಬಂದಿದ್ದ ದೊರೆಸ್ವಾಮಿ ಟೀ ಕುಡಿಯಲು ರಸ್ತೆ ದಾಟುತ್ತಿದ್ದಾಗ ಬಸ್ ಢಿಕ್ಕಿ ಹೊಡೆದಿದೆ.ಬಿಳಿಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ…