ತಾ.ಪಂ.ಮಾಜಿ ಸದಸ್ಯೆ ನಿವೇಶನದಲ್ಲಿ ದಾಂಧಲೆ…ಯುವಕನ ಮೇಲೆ ಹಲ್ಲೆ…ಅಕ್ರಮ ಪ್ರವೇಶ ಮಾಡಿ ಕಟ್ಟಡ ಧ್ವಂಸ…ಮೈಸೂರಿನಲ್ಲಿ ಆಟಾಟೋಪ…

ತಾ.ಪಂ.ಮಾಜಿ ಸದಸ್ಯೆ ನಿವೇಶನದಲ್ಲಿ ದಾಂಧಲೆ…ಯುವಕನ ಮೇಲೆ ಹಲ್ಲೆ…ಅಕ್ರಮ ಪ್ರವೇಶ ಮಾಡಿ ಕಟ್ಟಡ ಧ್ವಂಸ…ಮೈಸೂರಿನಲ್ಲಿ ಆಟಾಟೋಪ…

ಮೈಸೂರು,ಆ12,Tv10 ಕನ್ನಡ

ಮೈಸೂರು ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆಗೆ ಸೇರಿದ ನಿವೇಶನಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮೂವರು ವ್ಯಕ್ತಿಗಳು ದಾಂಧಲೆ ಮಾಡಿದ್ದಾರೆ.ಜೆಸಿಬಿ ತಂದು ಕಟ್ಟಡವನ್ನ

ಧ್ವಂಸಗೊಳಿಸಿದ್ದಾರೆ.ಪ್ರತಿರೋಧಿಸಿದ ಮಾಜಿ ಸದಸ್ಯೆ ಪುತ್ರನನ್ನ ಎಳೆದೊಯ್ದು

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಟ್ಟಡವನ್ನ ಧ್ವಂಸಗೊಳಿಸಿದ್ದಾರೆ.ಈ ಸಂಭಂಧ ಮೂವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ.

ಮೈಸೂರಿನ ಹೊರವಲಯದ ಹಿನಕಲ್ ಬಳಿ ಇರುವ ನಿವೇಶನದ ಸಂಖ್ಯೆ 2403 ಬಿ 3 ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆ ಚಿಕ್ಕತಾಯಮ್ಮ ಎಂಬುವರಿಗೆ ಸೇರಿದ್ದು.ಜಿ.ಡಬ್ಲೂ.ಎಸ್.ನಿವೇಶನದಲ್ಲಿ ಚಿಕ್ಕತಾಯಮ್ಮ ಕಟ್ಟಡ ನಿರ್ಮಿಸಿದ್ದಾರೆ.ನಿವೇಶನಕ್ಕೆ ಬಂದ ಮೂವರು ವ್ಯಕ್ತಿಗಳು ಏಕಾ ಏಕಿ ಜೆಸಿಬಿ ಯಂತ್ರದಿಂದ ಕಟ್ಟಡ ಕೆಡವಲು ಮುಂದಾಗಿದ್ದಾರೆ.ಇದನ್ನ ಪ್ರತಿರೋಧಿಸಿದ ಚಿಕ್ಕತಾಯಮ್ಮ ಪುತ್ರ ರಾಮ್ ಪ್ರೀತಂ ನ ಬಲವಂತವಾಗಿ ಎಳೆದೊಯ್ದು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕಬ್ಬಿಣದ ರಾಡಿನಿಂದ ಕಾಲಿಗೆ ಹೊಡೆದು ರಕ್ತಗಾಯ ಮಾಡಿದ್ದಾರೆ.ಈ ಎಲ್ಲಾ ಘಟನೆ ಸಿಸಿ ಕ್ಯಾಮರಾದಲ್ಲಿ ಹಾಗೂ ಮೊಬೈಲ್ ನಲ್ಲಿ ಸೆರೆಯಾಗಿದೆ.ನ್ಯಾಯಾಲಯದ ಯಾವುದೇ ಆದೇಶ ಪಡೆಯದೆ ಏಕಾಏಕಿ ನಿವೇಶನಕ್ಕೆ ಅಕ್ರಮವಾಗಿ ಪ್ರವೇಶಿಸಿ ಧಂಕಿ ಹಾಕಿ ಬಲವಂತವಾಗಿ ಯುವಕನನ್ನ ಎಳೆದೊಯ್ದು ಹಲ್ಲೆ ನಡೆಸಿದ ಮೂವರ ವಿರುದ್ದ ಕ್ರಮ ಕೈಗೊಳ್ಳುವಂತೆ ಚಿಕ್ಕತಾಯಮ್ಮ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ದಾಂಧಲೆ ನಡೆಸಿದವರು ಮಂಜುನಾಥ್ ಹಾಗೂ ರೌಡಿ ಶೀಟರ್ ಗಳಾದ ಲೋಕೇಶ್,ಕುಳ್ಳ ದರ್ಶನ್ ಎಂದು ಗುರುತಿಸಲಾಗಿದೆ.ಕಟ್ಟಡ ಧ್ವಂಸಗೊಳಿಸಿ ದಾಂಧಲೆ ನಡೆಸಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *