ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ದರ್ಶನ್ ಧೃವನಾರಾಯಣ್…ನಿವಾಸಿಗಳಿಗೆ ಆತ್ಮಸ್ಥೈರ್ಯ ತುಂಬಿದ ಶಾಸಕ…
- NewsTV10 Kannada Exclusive
- August 17, 2024
- No Comment
- 135
ನಂಜನಗೂಡು,ಆ17,Tv10 ಕನ್ನಡಕಪಿಲಾ ಪ್ರವಾಹಕ್ಕೆ ನಲುಗಿದ ಪ್ರದೇಶಗಳಿಗೆ ನಂಜನಗೂಡು ಶಾಸಕ ದರ್ಶನ್ಧೃವನಾರಾಯಣ್ ಭೇಟಿ ನೀಡಿ ಸಂತ್ರಸ್ಥರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.ನಂಜನಗೂಡು ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಗೆಬರುವ ಮುದ್ದಹಳ್ಳಿ, ಬ್ಯಾಳಾರುಹುಂಡಿ, ಸೂರಹಳ್ಳಿ, ದೇಪೇಗೌಡನ ಪುರ, ಕೃಷ್ಣಾಪುರ, ಕೂಗಲೂರು ಗ್ರಾಮಗಳಿಗೆ ಭೇಟಿ ನೀಡಿಹಾನಿಯಾಗಿರುವ ಮನೆಗಳ ಸ್ಥಳ ವೀಕ್ಷಣೆ ಮಾಡಿ ಅಭಯ ನೀಡಿದ್ದಾರೆ. ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.ಸರ್ಕಾರದ ಮಟ್ಟದಲ್ಲಿ ದೊರೆಯುವ ಸೌಲಭ್ಯಗಳನ್ನ ಸಂತ್ರಸ್ಥರಿಗೆ ಶೀಘ್ರದಲ್ಲಿ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರು, ತಹಸೀಲ್ದಾರ್ ಶಿವಕುಮಾರ್ ಕಾಸನೂರ್ ರವರು, EO ಜೆರಾಲ್ಡ್ ರಾಜೇಶ್ ರವರು, PDO, ಗ್ರಾ. ಪಂ ಅಧ್ಯಕ್ಷರುಗಳು, ಸದಸ್ಯರುಗಳು, ಗ್ರಾಮಸ್ಥರುಗಳು ಸೇರಿದಂತೆ ಹಲವು ಸ್ಥಳೀಯ ಮುಖಂಡರು ಹಾಜರಿದ್ದರು…