ಸ್ವಾಮಿ ವಿವೇಕಾನಂದರ ಬಗ್ಗೆ ಸತತ 14 ಗಂಟೆ 2 ನಿಮಿಷಗಳ ಕಾಲ ಭಾಷಣ…12ನೇ ವಯಸ್ಸಿನಲ್ಲೇ ವಿಶ್ವ ದಾಖಲೆ ನಿರ್ಮಿಸಿದ ಮಹೇಶ್ ಕುಮಾರ್…

ಸ್ವಾಮಿ ವಿವೇಕಾನಂದರ ಬಗ್ಗೆ ಸತತ 14 ಗಂಟೆ 2 ನಿಮಿಷಗಳ ಕಾಲ ಭಾಷಣ…12ನೇ ವಯಸ್ಸಿನಲ್ಲೇ ವಿಶ್ವ ದಾಖಲೆ ನಿರ್ಮಿಸಿದ ಮಹೇಶ್ ಕುಮಾರ್…

ಸ್ವಾಮಿ ವಿವೇಕಾನಂದರ ಬಗ್ಗೆ ಸತತ 14 ಗಂಟೆ 2
ಮೈಸೂರು,ಆ21,Tv10 ಕನ್ನಡ

ಸ್ವಾಮಿ ವಿವೇಕಾನಂದರ ಕುರಿತಂತೆ ಸತತ 14 ಗಂಟೆ 2 ನಿಮಿಷಗಳ ಕಾಲ ಭಾಷಣ ಮಾಡಿದ ಬನ್ನೂರಿಮ ಹನುಮನಾಳು ಗ್ರಾಮದ 12 ವರ್ಷದ ಬಾಲಕ ಮಹೇಶ್ ಕುಮಾರ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ವಿವೇಕಾನಂದರ ಹುಟ್ಟು, ಬೆಳವಣಿಗೆ, ಜೀವನಗಾಥೆ, ಸಾಧನೆ ಮತ್ತು ವಿಶ್ವಕ್ಕೆ ಅವರ ಕೊಡುಗೆಗಳ ಬಗ್ಗೆ ಮಾತನಾಡಿ, ವೈಯಕ್ತಿಕ ವಿಭಾಗದಲ್ಲಿ ಎಲೈಟ್ ವರ್ಲ್ಡ್ ರೆಕಾರ್ಡ್ ಅಕಾಡೆಮಿ, ಏಷ್ಯನ್ ಅಕಾಡೆಮಿ, ಇಂಡಿಯ ರೆಕಾರ್ಡ್ಸ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ನಗರದ ಪೂರ್ಣ ಚೇತನ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿರುವ ಮಹೇಶ್ ಕುಮಾರ್ ಎಚ್ಎಸ್ ನನ್ನು ಮೈಸೂರು ರಾಮಕೃಷ್ಣ ಆಶ್ರಮದ ಅದ್ಯಕ್ಷರಾದ ಸ್ವಾಮಿ ಶ್ರೀ ಮುಕ್ತಿದಾನಂದ ಮಹಾರಾಜ್ ರವರು ಆಶೀರ್ವಾದಿಸಿ ಪೂರ್ವಕವಾಗಿ ಸನ್ಮಾನಿಸಿದರು.

ನಂತರ ಮಾತನಾಡಿದ ಸ್ವಾಮೀಜಿ ರವರು
ಸ್ವಾಮಿ ವಿವೇಕಾನಂದರ ಸಾಧನೆ- ಬೋಧನೆ- ಜೀವನಗಾಥೆಯ ಅಪ್ಪಟ ಅಭಿಮಾನಿಯಾಗಿರುವ ವಿದ್ಯಾರ್ಥಿ ಮಹೇಶ್ ಕುಮಾರ್ ಎಚ್ ಎಸ್
ಮೈಸೂರು ಜಿಲ್ಲೆಯ ಬನ್ನೂರು ಸಮೀಪದ ಹನುಮನಾಳು ಎಂಬ ಪುಟ್ಟ ಗ್ರಾಮದ ಸೋಮಶೇಖರ ಮತ್ತು ತಾಯಮ್ಮ ಎಂಬ ರೈತ ದಂಪತಿಯ ಪುತ್ರ. ಒಂದರಿಂದ ಐದನೇ ತರಗತಿಯವರೆಗೆ ಹನುಮನಾಳಿನಲ್ಲಿ ವ್ಯಾಸಂಗ ಮಾಡಿದ, ಆತನಿಗೆ ಆರನೇ ತರಗತಿಯಿಂದ ನಗರದ ಎಚ್ ಡಿ ಕೋಟೆ ರಸ್ತೆಯಲ್ಲಿರುವ ಪೂರ್ಣ ಚೇತನ ಪಬ್ಲಿಕ್ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು, ಇತರರಿಗೂ ಸಾರುವ ಗುರಿಯನ್ನು ಹೊಂದಿರುವ ಮಹೇಶ ಈ ವಿಶ್ವದಾಖಲೆ ಸೃಷ್ಟಿಸಿ, ಮೈಸೂರು ನಗರಕ್ಕೆ ಕೀರ್ತಿ ತಂದಿದ್ದಾನೆ. ಶಿಕ್ಷಕಿ ಶ್ರೀಮತಿ ತನುಜ ಆತನಿಗೆ ಅಗತ್ಯವಾದ ತರಭೇತಿ, ಸಹಾಯ, ಪ್ರೇರಣೆ ನೀಡಿದ್ದರು. ಕುಗ್ರಾಮದ ಪ್ರತಿಭೆಯಾಗಿದ್ದರೂ, ಸುಮಾರು ಐಧಾರು ವರ್ಷಗಳ ಹಿಂದೆಯೇ ತಮ್ಮ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ, ಸ್ವಾಮಿ ವಿವೇಕಾನಂದರ ಬಗ್ಗೆ ವಿಚಾರಧಾರೆಗಳನ್ನು ತಿಳಿದು, ಅವರ ವ್ಯಕ್ತಿತ್ವದಿಂದ ಪ್ರೇರಿತನಾಗಿ, ಮಹೇಶ, ತನ್ನ ಓದು, ಆಸಕ್ತಿ, ಶ್ರದ್ದೆ ಮತ್ತು ವಿಶೇಷ ಪ್ರಯತ್ನದಿಂದ ಇಂದು ಸತತವಾಗಿ 14 ಗಂಟೆ ಗಳ ಕಾಲ ಸ್ವಾಮಿ ವಿವೇಕಾನಂದರ ಬಗ್ಗೆ ಮಾತಾನಾಡಿದ್ದು ಒಂದು ವಿಶೇಷತೆಯೇ ಸರಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ 14 ಗಂಟೆಗಳ ಕಾಲ ಭಾಷಣ ಮಾಡುವುದು ಅಷ್ಟು ಸುಲಭದ ವಿಚಾರವಲ್ಲ. ಇದು ಮಹಾ ವಿಶ್ವ ಚೈತನ್ಯ ಸ್ವಾಮಿ ವಿವೇಕಾನಂದರ ಅನುಗ್ರಹ ಈತನ ಮೇಲಿರುವುದಕ್ಕೆ ಸಾಕ್ಷಿ. ಇಡೀ ಜಗತ್ತಿಗೆ ಮಾರ್ಗದರ್ಶಕರಾದ ಸ್ವಾಮಿ ವಿವೇಕಾನಂದರ ಚಿತ್ರಣವನ್ನು ಆತ ಶಬ್ದಗಳ ಮೂಲಕ ಎಲ್ಲರ ಮುಂದಿಟ್ಟಿದ್ದಾನೆ. ಭಗವಂತನು ಮಹೇಶನ ಆಂತರ್ಯಕ್ಕೆ ಸಹಜವಾಗಿ ಮೇಧಾಶಕ್ತಿ, ಬುದ್ಧಿ ಶಕ್ತಿ ಮತ್ತು ಕ್ರಿಯಾಶಕ್ತಿಯನ್ನು ಅಭಿವ್ಯಕ್ತಗೊಳಿಸುವ ಶಕ್ತಿ, ಪ್ರತಿಭೆ ನೀಡಿದ್ದಾನೆ. ಮಹೇಶ ಆಸಕ್ತಿ , ಶ್ರದ್ದೆ, ಬೆಳೆಸಿಕೊಂಡು, ಭಾರತ ದೇಶದ ಬಗ್ಗೆ ಒಂದು ಅದ್ಭುತ ದೇಶ ಪ್ರೇಮವನ್ನು ತೋರಿಸಿ ಇತರರಿಗೆ ಸ್ಪೂರ್ತಿಯಾಗಿರುತ್ತಾನೆ,” ಎಂದು ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಶ್ರೀ ರಾಮಕೃಷ್ಣ ವಿದ್ಯಾಶಾಲಾದ ಸಂಚಾಲಕರಾದ ಸ್ವಾಮಿ ಶ್ರೀ ಯುಕ್ತೇಶಾನಂದ ಮಹಾರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿ ಸಾಧಕನನ್ನು ಆಶೀರ್ವದಿಸಿದರು…

Spread the love

Related post

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಆಸ್ತಿ ಮುಟ್ಟುಗೋಲು…ಬಣ್ಣ ಬಯಲು ಮಾಡಿದ ಇಡಿ…

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ…

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಆಸ್ತಿ ಮುಟ್ಟುಗೋಲು…ಬಣ್ಣ ಬಯಲು ಮಾಡಿದ ಇಡಿ… ಬೆಂಗಳೂರು,ಜ22,Tv10 ಕನ್ನಡ ಮುಡಾ ಮಾಜಿ ಆಯುಕ್ತ GT ದಿನೇಶ್…
ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ…

ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ…

ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ… ಮೈಸೂರು,ಜ22,Tv10 ಕನ್ನಡ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯಾಗಿ ಎರಡು ವರ್ಷಗಳು ಪೂರೈಸಿದ ಐತಿಹಾಸಿಕ…
ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ. ಹನೂರು Tv10 ಕನ್ನಡ21/01/2026 ಹನೂರು :ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ…

Leave a Reply

Your email address will not be published. Required fields are marked *