ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಧೋಖಾ…ಮೂವರ ವಿರುದ್ದ FIR ದಾಖಲು…
- Crime
- August 21, 2024
- No Comment
- 140
ಮೈಸೂರು,ಆ21,Tv10 ಕನ್ನಡ
ಮಂಡ್ಯ ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರಿ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ಹಣ ವಂಚಿಸಿದ ಮೂವರ ವಿರುದ್ದ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ಯಾತಮಾರನಹಳ್ಳಿಯ ಕುಮಾರ್ ಹಾಗೂ ಪ್ರಮೋದ್ ಮತ್ತು ವಿನೋದ್ ಕುಮಾರ್ ಎಂಬುವರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.ಧನುಷ್ ಕುಮಾರ್ ಎಂಬುವರು ವಂಚನೆಗೆ ಒಳಗಾಗಿ ಪ್ರಕರಣ ದಾಖಲಿಸಿದ್ದಾರೆ.
ಕುಮಾರ್ ಎಂಬಾತ ಧನುಷ್ ಕುಮಾರ್ ಗೆ ಪರಿಚಯವಾಗಿ ಮಂಡ್ಯಾ ದ ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರಿ ಕೊಡಿಸುವುದಾಗಿ ನಂಬಿಸಿ ಪ್ರಮೋದ್ ನನ್ನು ಪರಿಚಯಿಸಿದ್ದಾನೆ.ಇಬ್ಬರೂ ಸೇರಿ ಧನುಷ್ ಕುಮಾರ್ ಬಳಿ ಹಂತಹಂತವಾಗಿ 3.80 ಲಕ್ಷ ಪಡೆದಿದ್ದಾರೆ.ಸುಮಾರು ಎರಡು ತಿಂಗಳು ಕಳೆದ ನಂತರ ಆರೋಗ್ಯ ಇಲಾಖೆಯ ವಿನೋದ್ ಕುಮಾರ್ ರವರು ನೀಡಿದ್ದಾರೆಂದು ಹೇಳಿ ಅಪಾಯಿಂಟ್ ಆದಂತೆ ನಿಯೋಜನೆ ಪತ್ರ,ಆದೇಶ ಪತ್ರ,ನಿಪೇಕ್ಷಣಾ ಪತ್ರ,ಪರಿಚಲನಾದೇಶ ಪತ್ರ,ಐಡಿ ಕಾರ್ಡ್ ಮತ್ತು ಇತರ ದಾಖಲೆಗಳನ್ನ ಕೊಟ್ಟಿದ್ದಾರೆ.ದಾಖಲೆಗಳನ್ನ ನೋಡಿ ಅನುಮಾನಗೊಂಡು ಮಂಡ್ಯ ಆರೋಗ್ಯ ಇಲಾಖೆ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದಾಗ ನಕಲಿ ಎಂದು ಖಚಿತವಾಗಿದೆ.ಇದೇ ರೀತಿ ವಿಜಯ್ ಕುಮಾರ್ ಎಂಬುವರಿಗೆ 3 ಲಕ್ಷ,ರಾಘವೇಂದ್ರ ಎಂಬುವರಿಗೆ 3.8 ಲಕ್ಷ,ಕೃಷ್ಣವೇಣಿ ಎಂಬುವರಿಂದ 3.9 ಲಕ್ಷ,ಮಹೇಶ್ ಎಂಬುವರಿಂದ 3.5 ಲಕ್ಷ ಹಣ ಪೀಕಿರುವುದು ಬೆಳಕಿಗೆ ಬಂದಿದೆ.ಉದಯಗಿರಿ ಪೊಲೀಸ್ ಠಾಣೆಯಲ್ಲಿ ಈ ಸಂಭಂಧ FIR ದಾಖಲಾಗಿದೆ…