ಸಾರ್ವಜನಿಕ ಗಣಪತಿ ಕಾರ್ಯಕ್ರಮಕ್ಕೆ ಸಿಂಗಲ್ ವಿಂಡೋ ಅನುಮತಿ ನೀಡಿ…ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಯಿಂದ ಮನವಿ…
- TV10 Kannada Exclusive
- August 22, 2024
- No Comment
- 210
ಮೈಸೂರು,ಆ22,Tv10 ಕನ್ನಡ
ಸಾರ್ವಜನಿಕವಾಗಿ
ಗಣಪತಿ ಪ್ರತಿಷ್ಠಾಪಿಸು ಕಾರ್ಯಕ್ರಮಕ್ಕೆ ಸಿಂಗಲ್ ವಿಂಡೋ ಪರ್ಮಿಷನ್ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಸ್ಥಳೀಯ ಮುಖಂಡರು ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಗಿರಿಧರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಪಿ ಶಿವರಾಜು ರವರು ಮನವಿ ಪತ್ರ ಸ್ವೀಕರಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ಅನೇಕ ಸಂಘ ಸಂಸ್ಥೆಗಳು ಮತ್ತು ಯುವಕರು ರಸ್ತೆ ಬದಿಯಲ್ಲಿ ಹಾಗೂ ಪಾರ್ಕ್ ಗಳಲ್ಲಿ ಮತ್ತು ಸ್ಥಳೀಯ ಪ್ರದೇಶಗಳಲ್ಲಿ ಸಾಮೂಹಿಕವಾಗಿ ಗಣಪತಿಗಳನ್ನ ಪ್ರತಿಷ್ಠಾಪಿಸಿ ಹಬ್ಬ ಆಚರಣೆ ಮಾಡುವ ಕಾರ್ಯಕ್ರಮಕ್ಕೆ ಅವಶ್ಯಕತೆ ಇರುವ ಎಲ್ಲಾ ಅನುಮತಿ ಗಳನ್ನು ಒಂದೇ ಕಡೆ ನೀಡಬೇಕು ಎಂದು ಒತ್ತಾಯಿಸಿದರು. ಕಾರ್ಪೊರೇಷನ್, ಕೆಇಬಿ, ಕೆಎಸ್ಆರ್ಟಿಸಿ ಮತ್ತು ಪೊಲೀಸ್ ಹಾಗೂ ಅಗ್ನಿಶಾಮಕ ದಳ ಈ ಎಲ್ಲವೂ ಒಂದೇ ಕಡೆ ಅರ್ಜಿಗಳನ್ನು ತೆಗೆದುಕೊಂಡು 24 ಗಂಟೆಗಳಲ್ಲಿ ಪರಿಶೀಲಿಸಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಸರಳವಾಗಿ ಅನುಮತಿ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದರು.ಪುಟ್ಡ ಮಕ್ಕಳು ಆಯೋಜಿಸುವ ಕಾರ್ಯಕ್ರಮಕ್ಕೆ ಅನುಮತಿ ಅಗತ್ಯವಿಲ್ಲವೆಂದು ಘೋಷಿಸಬೇಕೆಂದು ಮನವಿ ಮಾಡಿದರು…
ಈ ಸಂದರ್ಭದಲ್ಲಿ ಬಿಜೆಪಿ ನಗರ ಉಪಾಧ್ಯಕ್ಷರಾದ ಎಸ್ ಕೆ ದಿನೇಶ್, ಜೋಗಿ ಮಂಜು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್ ಗೌಡ, ಎನ್ ಆರ್ ಕ್ಷೇತ್ರದ ಅಧ್ಯಕ್ಷರಾದ ಸ್ಮಾರ್ಟ್ ಮಂಜು, ಎನ್ ಆರ್ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ನವೀನ್ ರಾಜ್, ಹಾಗೂ ಇನ್ನಿತರರು ಹಾಜರಿದ್ದರು…