ಅರಮನೆ ಅಂಗಳಕ್ಕೆ ಗಜಪಡೆ ಗ್ರ್ಯಾಂಡ್ ಎಂಟ್ರಿ…ಜಿಲ್ಲಾಡಳಿತದಿಂದ ಅದ್ದೂರಿ ಸ್ವಾಗತ…

ಅರಮನೆ ಅಂಗಳಕ್ಕೆ ಗಜಪಡೆ ಗ್ರ್ಯಾಂಡ್ ಎಂಟ್ರಿ…ಜಿಲ್ಲಾಡಳಿತದಿಂದ ಅದ್ದೂರಿ ಸ್ವಾಗತ…

ಮೈಸೂರು,ಆ23,Tv10 ಕನ್ನಡವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2024 ರಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದ ಗಜಪಡೆ ಇಂದು ಅರಮನೆ ಆವರಣ ಪ್ರವೇಶಿಸಿತು.ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ವತಿಯಿಂದ ಅಭಿಮನ್ಯು ಅಂಡ್ ಟೀಂ ಗೆ ಅದ್ದೂರಿ ಸ್ವಾಗತ ಕೋರಲಾಯಿತು.
ಆನೆಗಳ ಆಗಮನದಿಂದ ದಸರೆಯ ವೈಭವ ಸಾಂಸ್ಕೃತಿಕ ನಗರಿಯಲ್ಲಿ ಕಳೆಗಟ್ಟಿದಂತಾಗಿದೆ.
ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗಜಪಡೆಗೆ ಬೆಳಿಗ್ಗೆ 10.10 ರಿಂದ 10.30 ರೊಳಗೆ ಸಲ್ಲುವ ಶುಭಗಳಿಗೆಯಲ್ಲಿಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.ಮೈಸೂರಿನ ಅಶೋಕಪುರಂನ ಅರಣ್ಯಭವನದಲ್ಲಿ ತಂಗಿದ್ದ ಆನೆಗಳಿಗೆ ಇಲಾಖೆ ವತಿಯಿಂದ ಪುಜೆ ಸಲ್ಲಿಸಿ ಬೀಳ್ಕೊಡಲಾಯಿತು.
ನಂತರ ಅರಣ್ಯಭವನದಿಂದ ಕಾಲ್ನಡಿಗೆ ಮೂಲಕ ಅರಮನೆಗೆ ಗಜಪಡೆ ತೆರಳಿತು.ಅಭಿಮನ್ಯು ಸೇರಿದಂತೆ ಏಕಲವ್ಯ, ಭೀಮ, ಕಂಜನ್, ಲಕ್ಷ್ಮೀ, ವರಲಕ್ಷ್ಮೀ, ರೋಹಿತ್, ಗೋಪಿ, ಧನಂಜಯ ಆನೆಗಳು ಅರಮನೆ ಕಡೆ ಹೆಜ್ಜೆ ಹಾಕಿ ಜನರ ಗಮನ ಸೆಳೆಯಿತು.ಪೂಜಾ ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್, ಶ್ರೀವತ್ಸ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಟ್ಕಾರ್, ಸಿಎಫ್ಒ ಮಾಲತಿ ಪ್ರಿಯ, ಡಿಸಿಪಿ ಮುತ್ತುರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು…

Spread the love

Related post

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ… ಚಾಮರಾಜನಗರ,ಜು28,Tv10 ಕನ್ನಡ ಕಾಡುಹಂದಿ ಬೇಟೆ ಮಾಡಿದ ಆರೋಪದ ಹಿನ್ನಲೆ ಓರ್ವ ಆರೋಪಿಯನ್ನ ಬಂಧಿಸಲಾಗಿದೆ.ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ ಘಟನೆ ನಡೆದಿದೆ.ಕೊಡಗು ಜಿಲ್ಲೆ…
ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…

Leave a Reply

Your email address will not be published. Required fields are marked *