ಬೀದಿ ಪಾಲಾಗಿದ್ದ ಸಾಧುಸಂತನ ನೆರವಿಗೆ ಧಾವಿಸಿದ SDPI ಮುಖಂಡರು…ಆಶ್ರಯ ಕಲ್ಪಿಸಿ ಮಾನವೀಯತೆ…
- MysoreTV10 Kannada Exclusive
- August 30, 2024
- No Comment
- 1076
ಮೈಸೂರು,ಆ30,Tv10 ಕನ್ನಡ
ಬಾಡಿಗೆ ನೀಡದ ಹಿನ್ನಲೆ ಮನೆಯಿಂದ ಹೊರದೂಡಿ ಬೀದಿ ಪಾಲಾಗಿದ್ದ ಸಾಧು ಸಂತನ ನೆರವಿಗೆ SDPI ಮುಖಂಡರು ಧಾವಿಸಿ ಆಶ್ರಯ ನೀಡಿ ಮಾನವೀಯತೆ ಪ್ರದರ್ಶಿಸಿದ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.SDPI ಸಂಘಟನೆಯ ಮುಖಂಡರಾದ ಅಮೀನ್ ಸೇಠ್ ಹಾಗೂ ಜಭಿ ಎಂಬುವರು ಸಾಧುಸಂತನ ಪರಿಸ್ಥಿತಿಗೆ ಮರುಗಿ ನೆರವಿಗೆ ಧಾವಿಸಿದವರು.ಬೀದಿಪಾಲಾಗಿದ್ದ ವೃದ್ದ ಸಾಧುಸಂತನಿಗೆ ಮತ್ತೆ ಮನೆ ಮಾಲೀಕರ ಮನ ಒಲಿಸಿ ಆಶ್ರಯ ಕಲ್ಪಿಸುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ.
ಮೈಸೂರಿನ ನೆಹರು ನಗರದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.ವಾಸು ಎಂಬ ವೃದ್ದ ಸಾಧು ಸಂತರೊಬ್ಬರು ಬೀದಿ ಪಾಲಾಗಿದ್ದರು.ಶ್ರೀನಿವಾಸ್ ಎಂಬುವರ ಮನೆಯಲ್ಲಿ ವಾಸು ಬಾಡಿಗೆಯಲ್ಲಿದ್ದರು.ದೇವಾಲಯಗಳಲ್ಲಿ ಪೂಜೆಗಳನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವಾಸು ರವರು 6 ತಿಂಗಳ ಹಿಂದೆ ಪಾರ್ಶ್ವವಾಯು ರೋಗಕ್ಕೆ ತುತ್ತಾದರು.ಆಗಿನಿಂದ ಓಡಾಡಲು ಶಕ್ತಿ ಇಲ್ಲದ ಕಾರಣ ವರಮಾನ ಸ್ಥಗಿತವಾಗಿತ್ತು.ಈ ಹಿನ್ನಲೆ ಬಾಡಿಗೆ ನೀಡಲು ಅಶಕ್ತರಾದರು.ಇದರಿಂದಾಗಿ ಮನೆ ಮಾಲೀಕರು ಇಂದು ಬೆಳಿಗ್ಗೆ ವಾಸು ರವರನ್ನ ಮನೆಯಿಂದ ಹೊರಹಾಕಿದ್ದರು.ಆಶ್ರಯವಿಲ್ಲದ ವಾಸು ಬೀದಿಯಲ್ಲಿ ಅನಾಥವಾಗಿ ಕಂಡುಬಂದರು.ಈ ಮಾಹಿತಿ ಅರಿತ SDPI ಸಂಘಟನೆಯ ಮುಖಂಡರು ವಾಸು ರವರ ನೆರವಿಗೆ ಧಾವಿಸಿದ್ದಾರೆ.ವಾಸು ರವರಿಂದ ಮಾಹಿತಿ ಪಡೆದು ನಂತರ ಮನೆ ಮಾಲೀಕ ಶ್ರೀನಿವಾಸ್ ರವರ ಮನ ಒಲಿಸಿ ಮತ್ತೆ ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೀಘ್ರದಲ್ಲಿ ವಾಸು ರವರನ್ನ ವೃದ್ದಾಶ್ರಮಕ್ಕೆ ಸೇರಿಸಲು ನಿರ್ಧರಿಸಿದ್ದಾರೆ.ಕೋಮು ಸಂಘರ್ಷಗಳ ಪ್ರಕರಣಗಳ ಮಧ್ಯೆ SDPI ಮುಖಂಡರ ಈ ಮಾನವೀಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ನಾವೆಲ್ಲಾ ಒಂದೇ ಎಂಬ ಸಂದೇಶವನ್ನ ಈ ಮುಖಂಡರು ಧ್ವೇಷಗಳನ್ನ ಬಿತ್ತುವ ಕಿಡಿಗೇಡಿಗಳಿಗೆ ಈ ಪ್ರಕರಣದ ಮೂಲಕ ರವಾನಿಸಿದ್ದಾರೆ…