ಗಜಪಡೆಗೆ ಭಾರ ಹೊರುವ ತಾಲೀಮು…600 ಕೆಜಿ ಮರಳು ಮೂಟೆ ಹೊತ್ತು ಸಾಗಿದ ಅಭಿಮನ್ಯು…
- TV10 Kannada Exclusive
- September 1, 2024
- No Comment
- 76
ಮೈಸೂರು,ಸೆ1,Tv10 ಕನ್ನಡದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.ಕಾಡಿನಿಂದ ನಾಡಿಗೆ ಬಂದ ಗಜಪಡೆ ದಸರಾ ಯಶಸ್ವಿಗೆ ಸಜ್ಜಾಗುತ್ತಿದೆ.ಈಗಾಗಲೇ ತಾಲೀಮು ಆರಂಭಿಸಿರುವ ಅಭಿಮನ್ಯು ಅಂಡ್ ಟೀಂ ಜಂಬೂಸವಾರಿಗೆ ಫಿಟ್ ಎಂದು ಹೇಳುತ್ತಿದೆ.ಇಂದು ಗಜಪಡೆಗೆ ಭಾರಹೊರೆಸಿ ತಾಲೀಮು ನಡೆಸಲಾಗಿದೆ.ಜಂಬೂಸವಾರಿ ಮೆರವಣಿಗೆ ದಿನ ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಐದು ಕಿಲೋಮೀಟರ್ ದೂರ ಸಾಗಲಿದ್ದಾನೆ. ಈ ಹಿನ್ನೆಲೆಯಲ್ಲಿ ಅಭಿಮನ್ಯುಗೆ ಭಾರ ಹೊರೆಸಿ ತಾಲೀಮು ನೀಡಲಾಗಿದೆ.ಮೊದಲ ದಿನವಾದ ಇಂದು ಅಭಿಮನ್ಯು 600 ಕೆಜಿ ತೂಕ ಹೊತ್ತು ಸಾಗಿದ್ದಾನೆ.ಅಭಿಮನ್ಯು ಸೇರಿದಂತೆ ಇತರ ಆನೆಗಳಿಗೂ ಭಾರ ಹೊರುವ ತಾಲೀಮು ನೀಡಲಾಗುತ್ತದೆ.
ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆ ಶೆಡ್ ನಲ್ಲಿ ಇಂದು ಬೆಳಿಗ್ಗೆ 7.30ಕ್ಕೆ ಪೂಜೆ ಸಲ್ಲಿಸಿ ಆನಂತರ ಅಭಿಮನ್ಯು ಮೇಲೆ 600 ಕೆಜಿ ತೂಕದ ಮರಳಿನ ಮೂಟೆಯನ್ನು ಹೊರಿಸಿ ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೂ ತಾಲೀಮು ನಡೆಸಲಾಗಿದೆ…