ಸುಮಂಗಲಿಯರಿಗೆ ಬಳೆ ತೊಡಿಸಿ ಗೌರಿ ಹಬ್ಬ ಸ್ವಾಗತಿಸಿದ ಮಾಜಿ ಕಾರ್ಪೊರೇಟರ್ ಮಾ.ವಿ.ರಾಮಪ್ರಸಾದ್…
- TV10 Kannada ExclusiveUncategorized
- September 5, 2024
- No Comment
- 71
ಮೈಸೂರು,ಸೆ5,Tv10 ಕನ್ನಡಮಹಿಳೆಯರು ನೆಚ್ಚಿನ ಗೌರಿ ಹಬ್ಬವನ್ನ ಆಚರಿಸಲು ಭರದಿಂದ ಸಿದ್ದತೆಮಾಡಿಕೊಳ್ಳುತ್ತಿದ್ದಾರೆ.ಗೌರಿ ಗಣೇಶನನ್ನ ಆರಾಧಿಸುವ ಮೂಲಕ ಸಡಗರದಿಂದ ಹಬ್ಬ ಆಚರಿಸಲು ಉತ್ಸಕರಾಗಿದ್ದಾರೆ.ಈ ಮಧ್ಯೆವಾರ್ಡ್ ನಂ.55 ರ ಮಾಜಿ ಕಾರ್ಪೊರೇಟರ್ ಮಾ.ವಿ.ರಾಮಪ್ರಸಾದ್ ರವರು ಮಹಿಳೆಯರಿಗೆ ಬಳೆಗಳನ್ನ ತೊಡಿಸುವ ಕಾರ್ಯಕ್ರಮ ನಡೆಸಿ ಗೌರ ಹಬ್ಬವನ್ನ ವಿಶೇಷವಾಗಿ ಸ್ವಾಗತಿಸಿದ್ದಾರೆ.ಮೈಸೂರಿನ ಮೇದರಕೇರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು.ನೂರಾರು ಮಹಿಳೆಯರು ಭಾಗವಹಿಸಿ ಬಳೆಗಳನ್ನ ತೊಡಿಸಿಕೊಂಡರು.ಪ್ರತಿವರ್ಷ ಗೌರಿ ಹಬ್ಬ ಮುನ್ನ ದಿನ ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮಾ.ವಿ.ರಾಮಪ್ರಸಾದ್ ಈ ವರ್ಷವೂ ಆಯೋಜಿಸಿದ್ದರು.ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ ಮಹಿಳೆಯರು ಗೌರಿ ಹಬ್ಬವನ್ನ ವಿಶೇಷವಾಗಿ ಸ್ವಾಗತಿಸಿದರು…